ಕುತ್ಲೂರು: ಯಾವುದೇ ಪರವಾಣಿಗೆ ಇಲ್ಲದೇ, ಎಲ್ಲಿಯೋ ಅಕ್ರಮವಾಗಿ ಗೋವಧೆ ಮಾಡಿ ಮಾಂಸವನ್ನು ಮಾರಾಟಕ್ಕಾಗಿ ಕೊಂಡೋಗುತ್ತಿದ್ದ ಮಾಹಿತಿ ಪಡೆದ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಮಾಂಸ ಸಹಿತ ಆರೋಪಿಗಳ ವಶದಲ್ಲಿದ್ದ 1 ಗಂಡು ಕರು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಜೀಪನ್ನು ಸ್ವಾಧೀನಪಡಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೆ.18 ರಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಕುತ್ಲೂರು ಎಂಬಲ್ಲಿ ಕೆಇಇ 1279 ನೋಂದಣಿ ಸಂಖ್ಯೆಯ ಜೀಪಿನಲ್ಲಿ ಆರೋಪಿಗಳಾದ ತೋಡುಪುಡ ತಾಲೂಕು,ಇಡ್ಕಿ ಜಿಲ್ಲೆ, ಕೇರಳ ನಿವಾಸಿ ಜಿನು ತೋಮಸ್ (34) ಮತ್ತು ಕುತ್ಲೂರು ನಿವಾಸಿ ರಂಜಿತ್ (31) ಎಂಬವರುಗಳು ಯಾವುದೇ ಪರವಾಣಿಗೆ ಇಲ್ಲದೇ, ಎಲ್ಲಿಯೋ ಅಕ್ರಮವಾಗಿ ಗೊ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸ್ ಉಪನಿರೀಕ್ಷಕ ಹಾಗೂ ಸಿಬ್ಬಂದಿಗಳು ಆರೋಪಿಗಳ ವಶದಲ್ಲಿದ್ದ 1 ಗಂಡು ಕರು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಜೀಪನ್ನು ಸ್ವಾಧೀನಪಡಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ 58-2023 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ ೨೦೨೦ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.