24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ಯೋಜನಾ ಕಛೇರಿ ವ್ಯಾಪ್ತಿಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮಡಂತ್ಯಾರು ಅಂಬೇಡ್ಕರ್ ಭವನದ ಆವರಣದಲ್ಲಿ ಮದ್ಯಪಾನ, ಅರೋಗ್ಯ, ಜಲಸಂರಕ್ಷಣೆ, ಜ್ಞಾನ ವಿಕಾಸ ಯೌಟ್ಯೂಬ್ ನಲ್ಲಿ ಬಿತ್ತರ ವಾಗುವ ಕಾರ್ಯಕ್ರಮದ ಬಗ್ಗೆ ಬೀದಿ ನಾಟಕ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾರೆಂಕಿ ಕಾರ್ಯಕ್ಷೇತ್ರದ ಒಕ್ಕೂಟ ಅಧ್ಯಕ್ಷರಾದ ಬಾಲಚಂದ್ರ ಹೆಗ್ಗಡೆ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪರವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಿ ಕಾರ್ಯಕ್ರಮದ ಉದ್ದೇಶ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಗೀತ ಶೆಟ್ಟಿ, ಪಾರೆಂಕಿ ಎ ಒಕ್ಕೂಟ ಅಧ್ಯಕ್ಷರಾದ ದಯಾನಂದ ಪೂಜಾರಿ, ಸೇವಾಪ್ರತಿನಿಧಿ ಶ್ರೀಮತಿ ಹರಿಣಾಕ್ಷಿ, ಲೀಲಾವತಿ, ಶೋಭಾ ಉಪಸ್ಥಿತರಿದ್ದರು. ಗಣೇಶಪುರ ಶ್ರೀ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿ ಸುರತ್ಕಲ್ ನ ಸಂಯೋಜಕರದ ಗಿರೀಶ್ ಬಳಗದವರಿಂದ ಅತ್ಯುತ್ತಮ ರೀತಿಯಲ್ಲಿ ಮನೋರಂಜಕವಾಗಿ ಬೀದಿ ನಾಟಕವನ್ನು ನಡೆಸಿಕೊಟ್ಟರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಹರಿಣಿ ನಿರೂಪಿಸಿ, ಮಡಂತ್ಯಾರು ವಲಯ ಮೇಲ್ವಿಚಾರಕರದ ವಸಂತ ಕುಮಾರ್ ಸ್ವಾಗತಿಸಿದರು.

Related posts

ಶಿಶಿಲ: ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆಯರಿಂದ ನೇಜಿ ನಾಟಿ ಕಾರ್ಯಕ್ರಮ

Suddi Udaya

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿ ಪೂಜೆೋತ್ಸವ

Suddi Udaya

ವಾರದ ಸಂತೆ ಮಾರುಕಟ್ಟೆಗೆ ಮೀಸಲಿರಿಸಿದ ಜಮೀನನ್ನು ಸ್ವಾಧೀನಪಡಿಸಿಕೊಂಡ ತಣ್ಣೀರುಪಂತ ಗ್ರಾ.ಪಂ.

Suddi Udaya

ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘದ ಹಿರಿಯ ಮಾಜಿ ನಿರ್ದೇಶಕರಿಗೆ ಸನ್ಮಾನ

Suddi Udaya

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya
error: Content is protected !!