September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ 137.95 ಕೋಟಿ ವ್ಯವಹಾರ, ರೂ. 53.26 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 9.50 ಡಿವಿಡೆಂಟ್

ಕೊಯ್ಯೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಯ್ಯೂರು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೆ. 18 ರಂದು ಪಂಚದುರ್ಗಾ ಸಹಕಾರಿ ಸಭಾಭವನ ಆದೂರು ಪೆರಾಲ್ ಕೊಯ್ಯೂರುನಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘವು ರೂ 137.95 ಕೋಟಿ ವ್ಯವಹಾರ ಮಾಡಿದ್ದು,53.26 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 9.50 ಶೇ ಡಿವಿಡೆಂಟ್ ಘೋಷಿಸಲಾಯಿತು. ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕುಮಾರ್ ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಎಂ.ಕೆ, ಕಾರ್ಯನಿರ್ವಹಣಾಧಿಕಾರಿ ಅನಂತ ಕೃಷ್ಣ ಭಟ್,ನಿರ್ದೇಶಕರರಾದ ಅಶೋಕ್ ಭಟ್, ಉಜ್ವಲ್ ಕುಮಾರ್, ಎನ್.ಪರಮೇಶ್ವರ ಗೌಡ, ರವೀಂದ್ರನಾಥ ಪಿ, ಪುರುಷೋತ್ತಮ, ಡೀಕಯ್ಯ ಪೂಜಾರಿ, ಶ್ರೀಮತಿ ಗುಲಾಬಿ,ಶ್ರೀಮತಿ ರೇವತಿ , ಯತೀಶ, ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸಂದೇಶ ಕುಮಾರ್ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೊಯ್ಯುರು ಸಿಎ ಬ್ಯಾಂಕಿನ ಸಿಬ್ಬಂದಿಗಳಾದ ಮಮತಾ ರೈ,ಕೇಶವ ಕೆ, ವಿನಾಯಕ ಬಿ,ಸುಕನ್ಯಾ ಬಿ.ಜೆ, ಲೋಕೇಶ್, ಯತೀಶ್, ದಿಲೀಪ್ ಕುಮಾರ್,ಸುದರ್ಶನ,ಸ್ವಸಹಾಯ ಪ್ರೇರಕಿ ಚಂಪಾ, ದೈನಂದಿನ ಠೇವಣಿ ಸಂಗ್ರಾಹಕಿ ಗೀತಾ, ಸರಾಫರು ಯೋಗೀಶ್ ಆಚಾರ್ಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ‌

Related posts

ನಾರಾವಿ ಮತ್ತು ಕುತ್ಲೂರು ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

Suddi Udaya

ಜು.1: ಧರ್ಮಸ್ಥಳದಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ  ಫಲಿತಾಂಶ

Suddi Udaya

ಪಣಕಜೆ ‌ಭಜನಾ ಮಂದಿರದ ಬಳಿ ನಡೆದ ಅಪಘಾತದಲ್ಲಿ ರಸ್ತೆ ಚರಂಡಿಗೆ ಬಿದ್ದ ಸ್ಕೂಟರ್

Suddi Udaya

ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ 175 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ವೆನ್ಲಾಕ್ ರಕ್ಷಾ ಸಮಿತಿ

Suddi Udaya

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ: ಬಿಜೆಪಿ ಶಾಸಕರುಗಳಿಂದ ವಿಧಾನ ಸೌಧದ ಎದುರು ಭಿತ್ತಿಪತ್ರ ಪ್ರದರ್ಶನ: “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಗಮನ ಸೆಳೆದ ಶಾಸಕ ಹರೀಶ್ ಪೂಂಜ ಪ್ರದರ್ಶಿಸಿದ ಬಿತ್ತಿಪತ್ರ

Suddi Udaya
error: Content is protected !!