25 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

ವೇಣೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ಬಿ.ಜೆ.ಪಿ.ಮಂಡಲದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಹಯೋಗದಿಂದ ಗುಂಡೂರಿ ಗ್ರಾಮದಲ್ಲಿರುವ ಅಬಲೆಯರ ಪುನರ್ವಸತಿ ಕೇಂದ್ರ ಸೇವಾಶ್ರಮದಲ್ಲಿ ಪ್ರಧಾನಿ ಮೋದೀಜಿಯವರ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಸೆ.17 ರಂದು ಆಚರಿಸಲಾಯಿತು.


ಮೋದೀಜಿಯವರ ನಾಯಕತ್ವವು ಪ್ರಬಲವಾಗಲು ಮತ್ತು ದೇಶದ ಬಿ.ಜೆ.ಪಿ ಸರ್ವ ಕಾರ್ಯಕರ್ತರ ನಾಯಕತ್ವವು ಉತ್ತಮ ಗುಣಮಟ್ಟದ್ದಾಗಲು ಈ ಮೂಲಕ ಇನ್ನೂ ಹೆಚ್ಚಿನ ದೇಶದ ಅಭಿವೃದ್ಧಿ ಆಗಲು ಸೇವಾಶ್ರಮದ ಆರಾಧ್ಯ ಗುರು ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ, ಸೇವಾಶ್ರಮದ ಆಶ್ರಮವಾಸಿಗಳಿಗೆ ಫಲವಸ್ತು ಹಾಗೂ ಒಂದು ಕಿಂಟ್ವಾಲ್ ಅಕ್ಕಿ ನೀಡಿ ಕಾರ್ಯಕರ್ತರಿಂದ ಸಂಭ್ರಮಾಚರಿಸಲಾಯಿತು.


ಈ ಸಂದರ್ಭದಲ್ಲಿ ವೇಣೂರು ಪಂಚಾಯತ್ ಅಧ್ಯಕ್ಷ ನೇಮಯ್ಯಕುಲಾಲ್, ಸದಸ್ಯರಾದ ಸಂಭಾಷಿಣಿ ಉದಯಕುಮಾರ್, ಹರೀಶ್ ಪಿ.ಎಸ್, ಅರುಣ್ ಹೆಗ್ಡೆ ಕರಿಮಣೇಲು ,ದಿನೇಶ್ ತಾರಿಪಡ್ಪು, ಕಾರ್ಯಕರ್ತರಾದ ಪ್ರಶಾಂತ್ ಹೆಗ್ಡೆ, ಗಿರೀಶ್ ಕುಲಾಲ್, ಪ್ರತೀಶ್ ಹೊಸಂಗಡಿ, ಸತೀಶ್ ಪೆರಿಂಜೆ, ಮತ್ತಿತ್ತರು ಉಪಸ್ಥಿತರಿದ್ದರು.


ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷ ಸುಂದರ ಹೆಗ್ಡೆ‌ ಮೋದೀಜಿಯವರ ಜನ್ಮದಿನದ ಬಗ್ಗೆ ಪ್ರಸ್ತಾಪನೆ ಗೈದರು. ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿದರು.

Related posts

ನಾರಾವಿ ಸಂತ ಅಂತೋನಿ ಪ.ಪೂ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕರ ಸಭೆ

Suddi Udaya

ಮೇ.1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Suddi Udaya

ಚಾರ್ಮಾಡಿ ಮಠದಮಜಲು ಹತ್ತಿರ ಇಂದ್ ಮರವನ್ನು ದೂಡಿ ಹಾಕಿದ ಆನೆ ವಿದ್ಯುತ್ ಫೀಡರ್ ಗೆ ಹಾನಿ: ದುರಸ್ತಿ ಪಡಿಸಿದ ಮೆಸ್ಕಾಂ ಇಲಾಖೆ

Suddi Udaya

ಜನಿವಾರ ತೆಗೆಸಿದ ಪ್ರಕರಣ: ತಾಲೂಕು ವಿಪ್ರ ಭಾಂದವರಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

Suddi Udaya

ಉಜಿರೆಯಲ್ಲಿ ಫ್ಲೇಕ್ ಎನ್ ಪ್ಲೇಟ್ ಶುಭಾರಂಭ

Suddi Udaya

ಉಜಿರೆ: ಚರ್ಮಗಂಟು ಲಸಿಕೆ ಕಾರ್ಯಕ್ರಮ

Suddi Udaya
error: Content is protected !!