ಪಿಲಿಗೂಡು : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 5.92 ಲಕ್ಷ ನಿವ್ವಳ ಲಾಭ, ಶೇ. 25% ಡಿವಿಡೆಂಟ್ ಘೋಷಣೆ

Suddi Udaya

ಕಣಿಯೂರು: “ಶ್ವೇತ ಸಮೂಹ” ಪಿಲಿಗೂಡು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ವಾರ್ಷಿಕ ಸಾಮಾನ್ಯ ಸಭೆ ಸೆ.17 ರಂದು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಿಲಿಗೂಡು ಕ್ರೀಡಾಂಗಣದಲ್ಲಿ ನಡೆಯಿತು.


ಸಂಘದ ಅಧ್ಯಕ್ಷರಾದ ಶ್ರೀಮತಿ ಕುಸುಮಾವತಿ ಕೆ. ಸಭೆಯ ಅಧ್ಯಕ್ಷೆ ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಭಾರತಿ ಕೆ. ವಾರ್ಷಿಕ ವರದಿ ವಾಚಿಸಿದರು.
2022-23 ನೇ ಸಾಲಿನ ಒಟ್ಟು ವ್ಯವಹಾರ 64,25,937.07 ನಡೆಸಿತು. ನಿವ್ವಳ ಲಾಭ 5,92,575.52 ಗಳಿಸಿತು. ಶೇಕಡ 25 ಡಿವಿಡೆಂಟ್. ಹಾಗೂ ರೈತರಿಗೆ 65 ಪರ್ಸೆಂಟ್ ನೀಡಲಾಯಿತು.


ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್ ಪಿ. ಮಾತನಾಡುತ್ತಾ ಒಕ್ಕೂಟದ ಸದಸ್ಯರಿಗೆ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನಂದ, ಸಂಘದ ನಿರ್ದೇಶಕರಾದ ಜಾನಾಕಿ, ಮಮತಾ, ಪ್ರೇಮ, ನಳಿನಿ, ಗಿರಿಜಾ, ಕುಸುಮವತಿ, ರಾಜೀವಿ, ವರಿಜಾ, ಇಂದಿರಾ, ಪ್ರೇಮ. ಸಿ., ಚೈತ್ರ ಎಂ ಜಿ. ಹಾಗೂ ಸದಸ್ಯರು ಭಾಗವಹಿಸಿದರು.
ಸಂಘದ ನಿರ್ದೇಶಕರಾದ ಜಾನಕಿ ಸ್ವಾಗತಿಸಿ. ಚೈತ್ರ ಧನ್ಯವಾದವಿತ್ತರು.

Leave a Comment

error: Content is protected !!