ಬಳಂಜ: ಪಂಚಶ್ರೀ ಮಹಿಳಾ ಭಜನಾ ಮಂಡಳಿಯ ಸದಸ್ಯರು ಕುವೆಟ್ಟು ಓಡಿಲ್ನಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದಾಸ ಸಾಹಿತ್ಯದಲ್ಲಿ ಉತ್ತಮ ಭಜನೆಯನ್ನು ಆಯ್ದುಕೊಂಡು ಶುಶ್ರಾವ್ಯ ಕಂಠದಿಂದ ಹಾಡುವ ಪಂಚಶ್ರೀ ಮಹಿಳಾ ಭಜನಾ ಮಂಡಳಿಯ ಸದಸ್ಯರು ತಾಲೂಕಿನಲ್ಲಿ ಹೆಸರನ್ನು ಪಡೆದಿದ್ದಾರೆ.

ಪುಷ್ಪಾ ಗಿರೀಶ್ ಸೇರಿದಂತೆ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷರಾದ ಭಾರತಿ ಸಂತೋಷ್ ಹಾಗೂ ಮಂಡಳಿಯ ಎಲ್ಲಾ ಸದಸ್ಯರು ಜೊತೆಯಾಗಿ ಕಾರ್ಯಕ್ರಮ ನೀಡುತ್ತಿದ್ದಾರೆ.