ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಸೆ.18ರಿಂದ ಅ.5 ರವರೆಗೆ ನಡೆಯುವ ಕಿಸ್ನ ಹಾಗೂ ಅಮೂಲ್ಯ ವಜ್ರಗಳ ಹಬ್ಬಕ್ಕೆ ಚಾಲನೆಯು ಸೆ.19 ರಂದು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಸೌಮ್ಯ ಜಯಂತ್ ಭಾಗವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ ಮಾತನಾಡಿ, ಗುಣಮಟ್ಟಕ್ಕೆ, ವಿನ್ಯಾಸ ಎಲ್ಲದರಲ್ಲೂ ಮುಳಿಯ ಜ್ಯುವೆಲ್ಸ್ ಎತ್ತಿದ ಕೈ, ಮುಳಿಯವು ಬೆಳ್ತಂಗಡಿಯಲ್ಲಿ ಮನೆಮಾತಾಗಿದ್ದು, 365 ದಿನವೂ ಇಲ್ಲಿ ಹಬ್ಬದಂತೆ ವ್ಯಾಪಾರ ನಡೆಯಲಿ ಎಂದು ಶುಭಹಾರೈಸಿದರು.
ಜಿ. ಪಂ. ಮಾಜಿ ಸದಸ್ಯೆ ಶ್ರೀಮತಿ ಸೌಮ್ಯ ಮಾತನಾಡಿ ಮುಳಿಯ ಜ್ಯುವೆಲ್ಸ್ ವ್ಯಾಪಾರ ವ್ಯವಹಾರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ. ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ, ಶಾಖಾ ಪ್ರಬಂಧಕರಾದ ಅಶೋಕ್.ಡಿ ಬಂಗೇರ, ಉಪ ಶಾಖಾ ಪ್ರಬಂಧಕರಾದ ಲೋಹಿತ್ ಕುಮಾರ್. ಪ್ರೊಕ್ಯೂರ್‍ಮೆಂಟ್ ಮ್ಯಾನೇಜರ್ ಲೋಕೇಶ್ ಹಾಗೂ ಮುಳಿಯ ಜ್ಯುವೆಲ್ಸ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ರಾಹಕರ ಕೈಗೆಟಕುವ ರೀತಿಯಲ್ಲಿರುವ ಡೈಮಂಡ್ ಫೆಸ್ಟ್, ಹೆಸರಿನಂತೆ . ಮಾತ್ರವಲ್ಲ ಗ್ರಾಹಕರಿಗಾಗಿ, ವಿಶೇಷ ಆಫರ್, ಗಿಫ್ಟ್’ಗಳನ್ನು ನೀಡಲಾಗಿದೆ.
ಡೈಮಂಡ್ ಉಂಗುರ ಗೆಲ್ಲುವ ಅವಕಾಶದ ಜೊತೆಗೆ ನಿಮ್ಮ ಹಳೆ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರಲ್ಲಿ ಪ್ರತಿ ಗ್ರಾಂ ಮೇಲೆ 100 ರೂ.ಗೂ ಅಧಿಕ ಪಡೆಯುವ ಸುವರ್ಣಾವಕಾಶ ಗ್ರಾಹಕರಿಗಿದೆ.
ಸಿಬ್ಬಂದಿ ಜಯಲಕ್ಷೀ ಪ್ರಾರ್ಥಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ದಿನೇಶ್ ಕುಮಾರ್ ವಂದಿಸಿದರು.