ಬೆಳ್ತಂಗಡಿ : ಇಲ್ಲಿಯ 13ನೇ ವರ್ಷದ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ
ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಗುರುನಾರಾಯಣ ಸಭಾ ಭವನದಲ್ಲಿ ಸೆ.18ರಂದು ನಡೆಯಿತು.

ಪ್ರಧಾನ ಭಾಷಣಕಾರರಾಗಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಮನೋರಮಾ ತೋಳ್ಪಾಡಿತ್ತಾಯ ಮಾತನಾಡಿ ಶ್ರೀಗಣೇಶೋತ್ಸವ ಆಚರಣೆಯ ಮಹತ್ವವನ್ನು ವಿವರಿಸಿದರು.

13ನೇ ವರ್ಷದ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಸಭಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಅನಂತ್ ಭಟ್ ಮಚ್ಚಿಮಲೆ ಉದ್ಘಾಟಿಸಿ ಮಾತನಾಡಿ ಸಮಾಜದ ದುಷ್ಟ ಶಕ್ತಿಯನ್ನು ನಾಶ ಮಾಡಲು ಜಾತಿ ಮತ ಭೇದ ಮರೆತು ಗೌರಿ ಗಣೇಶ ಹಬ್ಬದ ಆಚರಣೆ ಮಾಡಬೇಕಾಗಿದೆ.
ಎಲ್ಲರೂ ಒಂದಾಗಿ ಸಂಘಟಿತರಾಗಿ ಗಣೇಶ ಹಬ್ಬ ಆಚರಿಸಿದಾಗ ಒಳ್ಳೆಯದಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸುವುದು ಶ್ರೇಷ್ಠ ಕಾರ್ಯ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಕುಮಾರ್ ಜೈನ್, ರಾಮಕೃಷ್ಣಭಟ್ ಚೊಕ್ಕಾಡಿ, ನಾರಾಯಣ ಗೌಡ ಕೊಳ್ತಿಗೆ, ಗಿರೀಶ್ ಹೆಗ್ಡೆ, ಕಲ್ಲೇಶ್ , ವಿಜಯ ಕುಮಾರ್ , ಪ್ರಶಾಂತ್ ಸುವರ್ಣ, ಆನಂದ ದೇವಾಡಿಗ , ಶೇಷಗಿರಿ ಶೆಣೈ , ನಾಟಿ ವೈದ್ಯೆ ಸೇಸಮ್ಮ, ದೈವ ನರ್ತಕ ದೇವು ಪರವ , ನಾಗಪ್ಪ ಧರ್ಮಸ್ಥಳ, ದೇಜಮ್ಮ, ಮುಂತಾದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೇಶವ ಬೆಳಾಲು ಸ್ವಾಗತಿಸಿದರು., ಚಂದ್ರಹಾಸ ಬಳೆಂಜ ನಿರೂಪಿಸಿ, ಮೋಹನ್ ಶೆಟ್ಟಿಗಾರ್ ಧನ್ಯವಾದವಿತ್ತರು.