31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಜಿರೆ: ನಾವು ಜೀವನದಲ್ಲಿ ದಿನನಿತ್ಯ ಬಳಸುವ ಆಹಾರ ವಸ್ತುಗಳು, ಔಷಧಿಗಳು ಮತ್ತು ಪಾನೀಯಗಳು ಇವೆಲ್ಲವೂ ಮಿತವಾಗಿ ಬಳಸಬೇಕು ಅದೇ ರೀತಿ ಇತರ ಅಂದರೆ ಡೀಸೆಲ್, ಪೆಟ್ರೋಲ್, ನೈಲ್ ಪಾಲಿಷ್, ವೈಟ್ನರ್ ಇತ್ಯಾದಿಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಅವುಗಳ ಪರಿಮಳ ಹೆಚ್ಚು ಹೊತ್ತು ನಮ್ಮ ಮೂಗಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ಜನಜಾಗೃತಿ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯ್ಸ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಮದ್ಯಪಾನ/ಧೂಮಪಾನ/ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧನ ಇದನ್ನು ನಾವು ಮಾಡುವುದಾಗಲಿ ಮಾಡುವವರಿಗೆ ಸಹಕಾರ ನೀಡುವುದಾಗಲಿ ಒಳ್ಳೆಯದಲ್ಲ ಅದೇರೀತಿ ಜೀವಕ್ಕೆ ಹಾನಿ ಉಂಟು ಮಾಡುವ ಸ್ಟ್ರಿಂಗ್ ಜ್ಯೂಸ್ ಅತಿಯಾದ ಔಷಧ ಬಳಕೆ, ವೈದ್ಯರ ಸಲಹೆ ಪಡೆಯದೆ ಔಷದ ಸೇವನೆಯ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಕ್ಯಾನ್ಸರ್ ಕಿಡ್ನಿ ವೈಫಲ್ಯ ಲಿವರ್ ಸಮಸ್ಯೆ ಮುಂತಾದ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ನಾವು ಸಮಾಜದಲ್ಲಿ ಯಾವ ರೀತಿ ವರ್ತಿಸಿದರೆ ಉತ್ತಮ ಹಾಗೂ ನಮ್ಮ ದೇಹದ ಸ್ವಾಸ್ಥ್ಯ ಕಾಪಾಡುವುದೇ ಸ್ವಾಸ್ಥ್ಯ ಸಂಕಲ್ಪ ಇದನ್ನು ನಾವು ನೀವು ಪ್ರತಿಯೊಬ್ಬ ಕನ್ನಡಿಗನೂ ಪಾಲಿಸಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಇವರು ಉಪಸ್ಥಿತರಿದ್ದರು. ಉಜಿರೆ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹಾಗೂ ಯೋಜನಾಧಿಕಾರಿ ಉಪಸ್ಥಿತರಿದ್ದರು. ಕು ಪವಿತ್ರ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಜ್ಞಾ ಸ್ವಾಗತಿಸಿ ವಂದಿಸಿದರು.

Related posts

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಮರೋಡಿ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ ಸಂಪನ್ನ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಓದುವ ಸಪ್ತಾಹ

Suddi Udaya

ಮುಂಡಾಜೆ :ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶರತ್ ಕೃಷ್ಣ ಪಡ್ವೆಟ್ನಾಯ ಭೇಟಿ : ಸಕಲ ಸಿದ್ಧತೆಗಳ ವೀಕ್ಷಣೆ

Suddi Udaya
error: Content is protected !!