ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪ್ರೀಮತ್ ಡಿ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾಭವನದಲ್ಲಿ ನಡೆಸಲಾಯಿತು.
ಸಂಘವು ವರದಿ ಸಾಲಿನಲ್ಲಿ ರೂ.366 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.1ಕೋಟಿ64 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಪ್ರೀತಮ್ ಡಿ ಸದಸ್ಯರಿಗೆ 16% ಡಿವಿಡೆಂಟ್ ಘೋಷಿಸಿದರು.
ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ.ಸಂಘವು ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಅಜಿತ್ ಕುಮಾರ್ ಜೈನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಸತೀಶ್ ಹೊಳ್ಳ, ನಿರ್ದೇಶಕರಾದ ಶ್ರೀಮತಿ ಶಾಂಭವಿ ರೈ, ಉಮಾನಾಥ, ಶೀನ, ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಪ್ರಭಾಕರ ಗೌಡ ಬೊಳ್ಮ ,ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ, ವಿಕ್ರಂ ಗೌಡ, ತಂಗಚ್ಚನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ನಿರ್ದೇಶಕಿ ಧನಲಕ್ಷ್ಮಿ ಜನಾರ್ದನ್ ಸ್ವಾಗತಿಸಿದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಸತೀಶ್ ಹೊಳ್ಳ ವರದಿ ಮಂಡಿಸಿದರು. ಲೋಕೇಶ್ ಶೆಟ್ಟಿ ಎ.ಎಸ್ ಕಾರ್ಯಕ್ರಮ ನಿರೂಪಿಸಿದರು.ಸಂಘದ ನೌಕರ ವೃಂದದವರು ಸಹಕರಿಸಿದರು.
ಸಾಧಕರಿಗೆ ಸನ್ಮಾನ:
ಸಂಘದ ಹಿರಿಯ ಸಹಕಾರಿ ಬಂಧುಗಳಾದ ಸದಾನಂದಯ್ಯ,ರಾಘವ ಹೆಬ್ಬಾರ್ ಎಮ್,ನಾರಾಯಣ ಪೂಜಾರಿ,ಪಾಪಚ್ಚನ್.ಕೆ.ಪಿ,ಮಂಜುನಾಥ ಡಿ,ಧರ್ಣಮ್ಮ,ರಮೇಶ್ ಪ್ರಭು,ಕೃಷ್ಣ ಭಟ್ ಎಮ್,ಮಂಜುನಾಥ ಡಿ.ಎಸ್,ನಾಗೇಶ್ ರಾವ್ ಎಮ್,ಕೊರಗಪ್ಪ ಎಮ್ ಕೆ,ಪಾರ್ಶ್ವನಾಥ ಜೈನ್,ಮಾಯಿಲರವರನ್ನು ಸನ್ಮಾನಿಸಲಾಯಿತು . ಕೃಷಿ ಮತ್ತು ಇತರ ಕ್ಷೇತ್ರದಲ್ಲಿ ಸಾಧನೆಗೈದ ಸದಸ್ಯರಾದ ಶ್ರೀಕಾಂತ್ ರಾವ್,ವೆಂಕಪ್ಪ ಪೂಜಾರಿ,ಬಾಬು ಎಂ.ಕೆ,ರೂಪೇಶ್ ಇವರಿಗೆ ಗೌರವ ಪುರಸ್ಕಾರ 2023 ನೀಡ ಸನ್ಮಾನಿಸಲಾಯಿತು.ಅತೀ ಹೆಚ್ಚು ಠೇವಣಿ ಸಂಗ್ರಹಗಾರರಾದ ಗೀರೀಶ್ ಶೆಟ್ಟಿ, ವೆಂಕಪ್ಪ ಗೌಡ,ಪ್ರೇಮ ಆರ್ ಶೆಟ್ಟಿ ಹಾಗೂ ಸಂಘದ ಹಿರಿಯ ಸಿಬ್ಬಂದಿ ರವಿ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.