23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

ಅರಸಿನಮಕ್ಕಿ: ಸಮೂಹ ಸಂಪನ್ಮೂಲ ಕೇಂದ್ರ ಪೆರ್ಲ, ಇದರ ಪ್ರಾಥಮಿಕ ಶಾಲಾ ವಿಭಾಗದ 2023-24 ರ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸತತ 2ನೇ ಬಾರಿ ಪಡೆದುಕೊಂಡಿದ್ದಾರೆ.

ಹಿರಿಯ ವಿಭಾಗ :ಅದ್ವಿತಿ 6ನೇ ಧಾರ್ಮಿಕ ಪಠಣ ಹಾಗೂ ಲಘು ಸಂಗೀತದಲ್ಲಿ ಪ್ರಥಮ, ರಕ್ಷಿತಾ 7ನೇ ಹಿಂದಿ ಕಂಠಪಾಠ ಪ್ರಥಮ, ಚೈತ್ರೇಶ್ 6ನೇ ಮಿಮಿಕ್ರಿಯಲ್ಲಿ ಪ್ರಥಮ ಹಾಗೂ ಚಿತ್ರಕಲೆಯಲ್ಲಿ ದ್ವಿತೀಯ, ನಿವೇದಿತಾ 6ನೇ ಛದ್ಮವೇಷ ದಲ್ಲಿ ಪ್ರಥಮ ಹಾಗೂ ಭಕ್ತಿಗೀತೆಯಲ್ಲಿ ತೃತೀಯ, ಚೇತನಾ ಕವನ ವಾಚನದಲ್ಲಿ ಪ್ರಥಮ ಶ್ರಾವ್ಯ7ನೇ ಕಥೆ ಹೇಳುವುದು ಹಾಗೂ ಇಂಗ್ಲೀಷ್ ಕಂಠಪಾಠದಲ್ಲಿ ದ್ವಿತೀಯ, ಪ್ರಣಮ್ಯ 6ನೇ ಕನ್ನಡ ಕಂಠಪಾಠದಲ್ಲಿ ತೃತೀಯ ಸಿಂಚನಾ 6ನೇ ಅಭಿನಯ ಗೀತೆಯಲ್ಲಿ ತೃತೀಯ, ಕಿರಣ್ 6ನೇ ಪ್ಲೇ ಮಾಡೆಲಿಂಗ್ ತೃತೀಯ.

ಕಿರಿಯ ವಿಭಾಗ; ಕೀರ್ತನಾ 4ನೇ ಚಿತ್ರಕಲೆಯಲ್ಲಿ ಪ್ರಥಮ, ಭವಿಷ್ 3ನೇ ಛದ್ಮವೇಷದಲ್ಲಿ ದ್ವಿತೀಯ, ಅನುಷ್ಕಾ 2ನೇ ಅಭಿನಯ ಗೀತೆಯಲ್ಲಿ ದ್ವಿತೀಯ, ಗ್ರೀಷ್ಮ 4ನೇ ಕಥೆ ಹೇಳುವುದರಲ್ಲಿ ತೃತೀಯ, ಶಿವಾನಿ ಜೆ. ಎಸ್ 3 ನೇ ಭಕ್ತಿ ಗೀತೆಯಲ್ಲಿ ತೃತೀಯ, ಸ್ಕಂದ 1ನೇ ಲಘು ಸಂಗೀತ ದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇವರನ್ನು ಶಾಲಾ ಸಂಚಾಲಕರಾದ ವಾಮನ್ ತಾಮಡ್ಕರ್ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಯ ಅಧ್ಯಕ್ಷ ಉಪೇಂದ್ರ ರವರು ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು. ಹಾಗೂ ತಾಲೂಕು ಮಟ್ಟದಲ್ಲಿ ಸ್ಪರ್ಧಿಸಲಿರುವ ಅದ್ವಿತಿ, ರಕ್ಷಿತಾ, ನಿವೇದಿತಾ, ಚೈತ್ರೇಶ್, ಚೇತನಾ, ಕೀರ್ತನಾ ರವರನ್ನು ಶುಭ ಹಾರೈಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ, ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಲಕ್ಷ್ಮೀ, ಶ್ರೀಮತಿ ದಿವ್ಯಶ್ರೀ, ಕುಮಾರಿ ಲೋಲಾಕ್ಷಿ ಶ್ರೀಮತಿ ಹೇಮಾವತಿ, ಶ್ರೀಮತಿ ಸಂಧ್ಯಾ ಹಾಗೂ ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀ ಸಂತೋಷ್ ಗೋಖಲೆಯವರು ಮಾರ್ಗದರ್ಶನವನ್ನು ನೀಡಿದ್ದಾರೆ.

Related posts

ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

Suddi Udaya

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ.ಚಿರನ್ವಿ ಜೈನ್ ಗೆ ಪದವಿ

Suddi Udaya

ಮೊಗ್ರು – ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಕಿಂಗ್ ಸ್ಟಿಕ್ ವಿತರಣೆ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya

ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಉಜಿರೆ ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿ ದೀಕ್ಷಿತಾ. ಕೆ ರವರಿಗೆ ಬೆಳ್ಳಿ ಪದಕ

Suddi Udaya
error: Content is protected !!