September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವೀರಗಾಥ 3.0 ಪ್ರಾಜೆಕ್ಟ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ” ಶ್ರೀ ಮಂಜುನಾಥ ದಳ” ದ ಕಬ್ಸ್ , ಬುಲ್ ಬುಲ್ಸ್, ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರ ಮಾರ್ಗದರ್ಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಲಹೆ ಮೇರೆಗೆ ವೀರಗಾಥ 3.0 ಆನ್ಲೈನ್ ಸ್ಪರ್ಧೆಯಲ್ಲಿ 9ನೇ ತರಗತಿಯ ಸ್ಕೌಟ್ ವಿದ್ಯಾರ್ಥಿಯಾದ ಆಯುಷ್ ಕೆ. , ಏಳನೇ ತರಗತಿ ಚಿತ್ರಕಲೆ , ಗೈಡ್ ವಿದ್ಯಾರ್ಥಿಯಾದ ಬೃಂದಾ ಎಸ್ 7ನೇ ತರಗತಿ ಚಿತ್ರಕಲೆ, ಗೈಡ್ ವಿದ್ಯಾರ್ಥಿಯಾದ ರಿತಿಕಾ ಶೆಣೈ 7ನೇ ತರಗತಿ ಚಿತ್ರಕಲೆ, ಸ್ಕೌಟ್ ವಿದ್ಯಾರ್ಥಿಯಾದ ಶಾಶ್ವತ್ ಎಸ್ ಕುಮಾರ್ ಎಂಟನೇ ತರಗತಿ ಕವನ ರಚನೆ, ಗೈಡ್ ವಿದ್ಯಾರ್ಥಿಯಾದ ಸಿಂಚನ 9ನೇ ತರಗತಿ ಪ್ರಬಂಧ ಸ್ಪರ್ಧೆ, ಗೈಡ್ ವಿದ್ಯಾರ್ಥಿಯಾದ ಯಶ್ವಿತಾ ಏಳನೇ ತರಗತಿ ಪ್ರಬಂಧ ಸ್ಪರ್ಧೆ, ಬುಲ್ ಬುಲ್ ವಿದ್ಯಾರ್ಥಿಯಾದ ಉನ್ನತಿ ಎಸ್ ನಾಲ್ಕನೇ ತರಗತಿ ಚಿತ್ರಕಲೆ, ಸ್ಕೌಟ್ ವಿದ್ಯಾರ್ಥಿಯಾದ ರಕ್ಷಣ್ ಶೆಟ್ಟಿ 7ನೇ ತರಗತಿ ಕವನ ರಚನೆ, ಗೈಡ್ ವಿದ್ಯಾರ್ಥಿಯಾದ ಗೌತಮಿ ಚಿತ್ರಕಲೆ 7ನೇ ತರಗತಿ, ಸ್ಕೌಟ್ ವಿದ್ಯಾರ್ಥಿಯಾದ ಆಶಿಶ್ ಆರ್ ಕಾಮತ್ ಏಳನೇ ತರಗತಿ ಚಿತ್ರಕಲೆ ಇವರುಗಳು ಭಾಗವಹಿಸಿ ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಇವರಿಗೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರು ಆಗಿರುವ ಬಿ ಸೋಮಶೇಖರ್ ಶೆಟ್ಟಿ ಅವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

Related posts

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ: ಕಲಶಾಭಿಷೇಕ, ದರ್ಶನ ಬಲಿ

Suddi Udaya

ಎಸ್.ವೈ.ಎಸ್. ಮಡಂತ್ಯಾರ್ ಸರ್ಕಲ್ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಕಾಯರ್ತಡ್ಕ ಸ.ಕಿ.ಪ್ರಾ. ಶಾಲಾ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆ.ಬಿ ಆಯ್ಕೆ

Suddi Udaya

ಎ.10-17,ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ‌ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಗುಂಡೂರಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!