ಉಜಿರೆ : ಮುದ್ರಣ ಯಂತ್ರದ ಉದ್ಘಾಟನೆ

Suddi Udaya

ಉಜಿರೆ : “ಇಂದಿನ ಕಾಲಮಾನದ ಶಿಕ್ಷಣದಲ್ಲಿ ಮುದ್ರಣ ಯಂತ್ರ ಬರಿ ಆಡಂಬರವಲ್ಲ ಅನಿವಾರ್ಯ. ಇದರಿಂದಾಗುವ ಸದುಪಯೋಗ ಪ್ರತಿನಿತ್ಯದ ಬೋಧನೆಯಲ್ಲಿ ಅಳವಡಿಸುವುದು ಅತ್ಯಗತ್ಯ” ಎಂದು ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಇವರು ಹೇಳಿದರು.

ಇವರು ಎಸ್. ಡಿ .ಎಂ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ) ಉಜಿರೆ ಇಲ್ಲಿ ಮುದ್ರಣ ಯಂತ್ರದ ಉದ್ಘಾಟಕರಾಗಿ ಆಗಮಿಸಿ ಮಂಜುನಾಥ ಸ್ವಾಮಿಯ ಚಿತ್ರ ಪ್ರತಿಯನ್ನು ಮುದ್ರಣ ಮಾಡುವ ಮೂಲಕ ಉದ್ಘಾಟಿಸಿ ಶಾಲೆ ಹಾಗೂ ಶಿಕ್ಷಕ ವೃಂದಕ್ಕೆ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಮಾ ಶ್ರೀನಾಥ್ ಪ್ರಾರ್ಥನೆ ಮಾಡಿ, ಶಿಕ್ಷಕಿ ಸುಜನ ವಾಲ್ತಾಜೆ ನಿರೂಪಣೆ ಮಾಡಿದರು.

Leave a Comment

error: Content is protected !!