23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ನಿವೃತ್ತ ಯೋಧ ದಿನೇಶ್ ಮೂಲ್ಯಹೃದಯಾಘಾತದಿಂದ ನಿಧನ


ಮಾಲಾಡಿ : ಮಾಲಾಡಿ ಗ್ರಾಮದ ಕೋಡಿಯೇಲು ನಿವಾಸಿ ನಿವೃತ್ತ ಯೋಧ ದಿನೇಶ್ ಮೂಲ್ಯ (45ವ) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.23ರಂದು ವರದಿಯಾಗಿದೆ.


ಮೂಲತಃ ಕಿನ್ನಿಗೋಳಿ ನಿವಾಸಿಯಾಗಿರುವ ದಿನೇಶ್ ಮೂಲ್ಯ ಅವರು ಮಾಲಾಡಿ ಗ್ರಾಮದ ಕೋಡಿಯೇಲು ಎಂಬಲ್ಲಿ ಜಾಗ ಖರೀದಿಸಿ ಅಲ್ಲಿ ವಾಸ್ತವ್ಯವಿದ್ದರು, ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದ ಅವರು ಹತ್ತು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.
ನಿವೃತ್ತಿಯ ಬಳಿಕ ಹೆಚ್‌ಪಿಸಿಎಲ್‌ನ ಗೇರುಕಟ್ಟೆಯ ಬಳಿಯ ಪಂಪು ಹೌಸ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ ಈ ಹಿಂದೆ ಲಘು ಹೃದಯಾಘಾತವಾಗಿದ್ದು, ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಸೆ.23ರಂದು ಬೆಳಗ್ಗೆ ಆರೋಗ್ಯ ತಪಾಣೆಗಾಗಿ ಮಂಗಳೂರಿಗೆ ಹೋಗುತ್ತಿರುವ ಸಮಯ ಅವರಿಗೆ ದಾರಿ ಮಧ್ಯೆ ಹೃದಯಾಘಾತವಾಯಿತ್ತೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟರೆಂದು ವರದಿಯಾಗಿದೆ.
ಮೃತರು ತಂದೆ, ತಾಯಿ, ಪತ್ನಿ ಓಡಿಲ್ನಾಳ ಶಾಲಾ ಶಿಕ್ಷಕಿ ನಯನ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Related posts

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಹಾಡು ಹಗಲೇ ಗರ್ಡಾಡಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಸಹಿತ ನಗದು ಕಳವು

Suddi Udaya

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯರ ಶವ ಬಾವಿಯಲ್ಲಿ ಪತ್ತೆ:

Suddi Udaya

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಉಜಿರೆ: ಅಂಗಡಿ-ಹೋಟೆಲ್ ಗೆ ನುಗ್ಗಿದ ಕಳ್ಳರು

Suddi Udaya

ಕಡಿರುದ್ಯಾವರ: ಅಕ್ರಮ ಮರಳು ಸಾಗಾಟಕ್ಕೆ ಯತ್ನ: ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!