ಬೆಳಾಲು: ಮಾಯ ಬೆಳಾಲು ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ಮಾಯಾ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಯಶೋಧ ಮುoಡ್ರೊಟ್ಟು ಇವರ ಅಧ್ಯಕ್ಷತೆಯಲ್ಲಿ ಪೋಷಣಾ ಮಾಸ ಆಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಳಾಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿದರು. ಡಾ. ಮಂಜು ಎಚ್ಆರ್, ಧರ್ಮಸ್ಥಳ ಆರೋಗ್ಯ ಕೇಂದ್ರ ಹಾಗೂ ಕುಮಾರಿ ಪ್ರಮೀಳ, ಶಿಕ್ಷಣ ಸಂಯೋಜಕಿ ದಯಳ್ ಬಾಗ್ ಗ್ರಾಮಾಭಿವೃದ್ಧಿ ಬೆಳ್ತಂಗಡಿ ಇವರು ಪೋಷಣ ಅಭಿಯಾನದ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಜಯಂತಿ , ಬೆಳಾಲು ಮಾಯ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶ್ರೀಮತಿ ಜಾನ್ಸಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಸಂಜೀವಿನಿ ಎಂಬಿಕೆ ಶ್ರೀಮತಿ ಹರಿಣಾಕ್ಷಿ, ಆಶಾ ಕಾರ್ಯಕರ್ತೆರಾದ ಶ್ರೀಮತಿ ಪ್ರೇಮ ಮತ್ತು ಶೀಲಾವತಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಶ್ರೀಮತಿ ಸುಜಾತ ಹಾಗೂ ಶ್ರೀ ಶಕ್ತಿ ಸಂಘದ ಸದಸ್ಯರು ಸಂಜೀವಿನಿ ಸದಸ್ಯರು ದಯಾಳ್ ಬಾಗ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಮಕ್ಕಳಿಗೆ ಬಣ್ಣದ ಪೆನ್ಸಿಲ್ ಹಾಗೂ ಡ್ರಾಯಿಂಗ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೋಕಮ್ಮ ಕಾರ್ಯಕ್ರಮ ನಿರೂಪಿಸಿ, ಸ್ತ್ರೀಶಕ್ತಿ ಸಂಘದ ಸದಸ್ಯರಾದ ಶ್ರೀಮತಿ ಸುಕನ್ಯಾ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಮಕ್ಕಳ ಹೆತ್ತವರು ಮಾಡಿದ ವಿವಿಧ ತಿಂಡಿ ತಿನಸುಗಳ ಪ್ರದರ್ಶನ ನಡೆಯಿತು.