23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕುತ್ಲೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಮಕ್ಕಳು ಚಿಕ್ಕಂದಿನಲ್ಲಿ ತಮ್ಮ ಉಡುಪಿನ ಬಗ್ಗೆ ಜಾಗ್ರತೆ ಮತ್ತು ಕಾಳಜಿಯನ್ನು ವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದು ಅವರಲ್ಲಿ ಶಿಸ್ತು ಮತ್ತು ಸಮಾನತೆಯ ಭಾವವನ್ನು ಬೆಳೆಸುತ್ತದೆ. ಅದಕ್ಕಾಗಿಯೇ ಬಿಳಿ ಮತ್ತು ನೀಲಿ ಬಣ್ಣದ ಸಮವಸ್ತ್ರವನ್ನು ನೀಡಿರುವುದು. ಒದಗಿಸಿದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು, ಒಳ್ಳೆಯ ಅಂಕಗಳನ್ನು ಪಡೆದುಕೊಂಡು, ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು. ಆ ಮೂಲಕ ಶಾಲೆಗೆ ಕೃತಜ್ಞರಾಗಿದ್ದುಕೊಂಡು ಸಂಸ್ಥೆಯ ಉನ್ನತಿಗೆ ಸಹಕರಿಸಿ . ಹಾಗೂ ಪ್ರತಿವರ್ಷ ಶಾಲೆಯ ಅಭಿವೃದ್ಧಿಗೆ ಪೂರಕವಾಗಿರುವ ಬಹಳಷ್ಟು ಕೊಡುಗೆಗಳನ್ನು ಕೊಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಸದಸ್ಯರನ್ನು ಸದಾ ಸ್ಮರಿಸುತ್ತೇವೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ನುಡಿದರು.

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುತ್ಲೂರು ಇಲ್ಲಿ ಎಮ್.ಸಿ.ಎಫ್ ಸಂಸ್ಥೆ ಕೊಡ ಮಾಡಿದ 103 ವಿದ್ಯಾರ್ಥಿಗಳ ಸಮವಸ್ತ್ರವನ್ನು ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜವರ್ಮ ಜೈನ್ ರವರು ವಿತರಿಸಿದರು.

ನಿಕಟ ಪೂರ್ವ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರಾದ ಸಂತೋಷ್ ಮರ್ದೊಟ್ಟು ವೇದಿಕೆಯಲ್ಲಿದ್ದರು.

ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ರೂಪ ಕುಮಾರಿಯವರು ಸ್ವಾಗತಿಸಿದ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಆಶಾ ರವರು ನಿರೂಪಿಸಿದರು. ಗೌರವ ಶಿಕ್ಷಕಿ ಮಾಲತಿ ವಂದಿಸಿದರು.

Related posts

ನಾಳೆ(ಜು.6): ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ : ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ದಿತಿ ಸಾಂತ್ವನ ನಿಧಿ ವಿತರಣೆ

Suddi Udaya

ಸೋಣಂದೂರು: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Suddi Udaya

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ

Suddi Udaya

ಬಟ್ಲಡ್ಕ ಜಮಾಅತ್ ನ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Suddi Udaya

ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖೋ ಖೋ ಪಂದ್ಯಾಟ

Suddi Udaya

ಬೆಳ್ತಂಗಡಿ: ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್.ಐ.ಟಿ ನೋಟಿಸ್

Suddi Udaya
error: Content is protected !!