ಪುಂಜಾಲಕಟ್ಟೆ: ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ನಡೆಸುವ ಜಿಲ್ಲಾಮಟ್ಟದ ರೋವರ್ಸ್ ರೇಂಜರ್ಸ್ ನಿಪುಣ್ ಪರೀಕ್ಷೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ರೋವರ್ಸ್ ಗಳಾದ ಕೀರ್ತಿ ಮತ್ತು ಪ್ರತೀಕ್, ರೇಂಜರ್ಸ್ ಗಳಾದ ತೃಪ್ತಿ, ಡಯಾನ, ಸಹನಾ, ರಶ್ಮಿತ, ಕೃತಿಕಾ. ಒಟ್ಟು ಏಳು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿ, ಸೆ. 24ರಂದು ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯವರ ಮನೆಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ( ಐ ಎ ಎಸ್) ಇವರಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ರೇಂಜರ್ ಲೀಡರ್, ಬಿ.ಬಿ.ಎ ವಿಭಾಗದ ಮುಖ್ಯಸ್ಥೆಯಾದ ಡಾ. ಪ್ರೀತಿ ಕೆ ರಾವ್ ಮತ್ತು ರೋವರ್ ಸ್ಕೌಟ್ ಲೀಡರ್ ಪ್ರೊ. ಆಂಜನೇಯ ಎಂ. ಏನ್. ಮಾರ್ಗದರ್ಶನ ನೀಡಿದರು.