ಬೆಳ್ತಂಗಡಿ : ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕಾರ್ಕಳ ಇದರ 2022-23 ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.24 ರಂದು ಕಾರ್ಕಳ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಭವನದಲ್ಲಿ ಸಹಕಾರಿಯ ಅಧ್ಯಕ್ಷರಾದ ನೇಮಿರಾಜ ಆರಿಗ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ಅಧ್ಯಕ್ಷ ನೇಮಿರಾಜ ಆರಿಗ ಅವರು ಮಾತನಾಡಿ, ಸಂಘವು ವರದಿ ಸಾಲಿನಲ್ಲಿ ರೂ. 130 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ 17,92, 882 ಲಾಭಗಳಿಸಿದ್ದು ಸಂಘದ ಸದಸ್ಯರಿಗೆ ಶೇಕಡಾ 14 ಡಿವಿಡೆಂಟ್ ಘೋಷಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು ತಮ್ಮ ಸಭಾಭತ್ಯೆಯನ್ನು 16 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನಾಗಿ ನೀಡಿದರು ಹಾಗೂ ಮರಣ ಹೊಂದಿದ 3 ಸಾಲಗಾರರ ಸಾಲಗಳನ್ನು ಭರಿಸಿ ಆ ಕುಟುಂಬಗಳಿಗೆ ಸಾಲ ಋಣ ಮುಕ್ತ ಪತ್ರ ನೀಡಲಾಯಿತು.
ನಿರ್ದೇಶಕ ಶಶಿಕಿರಣ್ ಜೈನ್ ವರದಿ ವಾಚಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶಶಿಕಿರಣ್ ಜೈನ್ ಹಾಗೂ ನಿರ್ದೇಶಕರುಗಳಾದ ಪದ್ಮರಾಜ್ ಅತಿಕಾರಿ, ಮೊಹಮ್ಮದ್ ಗೌಸ್,ಶಮಂತ್ ಕುಮಾರ್ ಜೈನ್, ನಿರಂಜನ್ ಜೈನ್, ಎಸ್ ಪಿ ವರ್ಮ, ಪ್ರಶಾಂತ್ ಕುಮಾರ್, ಶ್ರೀಮತಿ ಪದ್ಮಲತಾ, ಶ್ರೀಮತಿ ಸುಜಾತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶುಕುಮಾರ್ ಜೈನ್ ಉಪಸ್ಥಿತರಿದ್ದರು.
ಸಿಬ್ಬಂದಿ ಕು| ಅನುಷಾ ಇವರ ಪ್ರಾರ್ಥನೆ ಬಳಿಕ ಎಸ್.ಪಿ ವರ್ಮ ಸ್ವಾಗತಿಸಿದರು. ವಿಶುಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಸೂಲಾತಿ ಅಧಿಕಾರಿ ರಾಕೇಶ್ ಕುಮಾರ್ ಧನ್ಯವಾದವಿತ್ತರು.