37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಲೈಫ್‌ಸ್ಟೈಲ್‌ವರದಿಸಾಧಕರು

ಕಿರುತೆರೆ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ ನಿರ್ದೇಶಕ ಅನುಬಂಧ ಆವಾರ್ಡ್-2023: ಮಂಗಳ ಗೌರಿ, ರಂಗನಾಯಕಿ, ಗೀತಾ, ಕೆಂಡಸಂಪಿಗೆ ಧಾರಾವಾಹಿ ನಿರ್ದೇಶನ

ಬೆಳ್ತಂಗಡಿ: ಅನುಬಂಧ ಆವಾರ್ಡ್ ನಲ್ಲಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಧಾರಾವಾಹಿಯ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ‌ ನಿರ್ದೇಶಕ ಅನುಬಂದ್ ಆವಾರ್ಡ್-2023 ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ಸಿನೆಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸುಭಾಷ್ ಅರ್ವ ಸ್ವೀಕರಿಸಿ,ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಕೆಂಡಸಂಪಿಗೆ ಧಾರಾವಾಹಿಗೆ ನಿರ್ದೇಶನ ಮಾಡಿ ಅನುಬಂಧ ಆವಾರ್ಡ್ ಪ್ರಶಸ್ತಿಯನ್ನು ಪಡೆದು ತನ್ನ ಸಾಧನೆ ಹಾಗೂ ಊರಿನ ಘನತೆಯನ್ನು ಇಡೀ ಕರ್ನಾಟಕಕ್ಕೆ ಪರಿಚಯ ಮಾಡಿದ್ದಾರೆ.

ಸುಭಾಷ್ ಅರುವರವರು 2008ರಲ್ಲಿ ತನ್ನ ವಿದ್ಯಾಭ್ಯಾಸವನ್ನು ಬೆಳ್ತಂಗಡಿಯಲ್ಲಿ ಪೂರ್ಣಗೊಳಿಸಿ ಕಲಾವಿದನಾಗಬೇಕೆಂದು ಕಲಾ ರಂಗವನ್ನು ಬೆಂಗಳೂರಿನಲ್ಲಿ ಸೇರುತ್ತಾರೆ.ಸತತ ಪರಿಶ್ರಮದ ಫಲವೇ ಈ ಕಲರ್ಸ್ ಕನ್ನಡ ಅನುಬಂಧ ಬೆಸ್ಟ್ ಡೈರೆಕ್ಟರ್ ಅವಾರ್ಡ್. ಇವರು ವಿನು ಬಳಂಜ ಅವರ ಗರಡಿಯಲ್ಲಿ ಪಲಗಿ ಸಹನಿರ್ದೇಶಕನಾಗಿ,ಸಹಾಯಕ ನಿರ್ದೇಶಕನಾಗಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ‌.ಇವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಸೀರಿಯಲ್ ಗಳು ಸೂಪರ್ ಡೂಪರ್ ಹಿಟ್ ಅಗಿದೆ. ಅದರಲ್ಲಿ ಮಂಗಳ ಗೌರಿ, ರಂಗನಾಯಕಿ, ಗೀತಾ, ಪ್ರಸ್ತುತ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಸೀರಿಯಲ್ ಕೆಂಡಸಂಪಿಗೆ.

ಹಿರಿತೆರೆಯ ಬೇರ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೊಗ್ರು ಗ್ರಾಮದ ನಿವಾಸಿಯಾಗಿದ್ದು,ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣರವರ ಸಹೋದರ.

Related posts

ಬಳಂಜದಲ್ಲಿ ಟಿಪ್ಪರ್ ಪತ್ತೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಪವನ್ ಸಾಲ್ಯಾನ್ ಕೊಲ್ಲಾಜೆ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ.93.47 ಫಲಿತಾಂಶ

Suddi Udaya

ಅಳದಂಗಡಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya

ವೇಣೂರು ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya
error: Content is protected !!