27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುತ್ಲೂರು: ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಉಚಿತ ಕೃಷಿ ಉಪಕರಣಗಳ ವಿತರಣೆ

ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬಗಳಿಗೆ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಇಂಡಿಯ ಬೆಂಗಳೂರು, ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರ ಭಟ್, ಕುಕ್ಕುಜೆ ಕ್ಷೇತ್ರಾಧಿಕಾರಿಗಳ ನೇತೃತ್ವದಲ್ಲಿ ಉಚಿತ ಕೃಷಿ ಉಪಕರಣಗಳ ವಿತರಣಾ ಕಾರ್ಯಕ್ರಮ ಸೆ.25 ರಂದು ನೆರವೇರಿತು.

ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಉಡುಪಿ ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ 96 ಫಲಾನುಭವಿಗಳಿಗೆ ಡಬ್ಲ್ಯೂ ಸಿ ಎಸ್ ಇಂಡಿಯ ಬೆಂಗಳೂರು, ಇದರ ಆಶ್ರಯದಲ್ಲಿ ಅಡಿಕೆಗೆ ಔಷಧ ಸಿಂಪಡಣೆ ಯಂತ್ರ 8 ಜನರಿಗೆ, ಅಡಿಕೆ ಮರ ಹತ್ತುವ ಯಂತ್ರ 4 ಜನರಿಗೆ, ಅಲ್ಯುಮಿನಿಯಂ ಏಣಿ 10 ಜನರಿಗೆ, ಕೈಗಾಡಿ 5 ಜನರಿಗೆ, ಸೋಲಾರ್ ಟರ್ಪಲ್ 5 ಜನರಿಗೆ, 5,000 ಅಡಿಕೆ ಸಸಿ, 200 ತೆಂಗಿನ ಸಸಿ, 200 ಕೊಕ್ಕೋ, 20 ಜನ ಫಲಾನುಭವಿಗಳಿಗೆ ತಲಾ 50 ರಂತೆ ಮಲ್ಲಿಗೆ ಗಿಡ, 25 ಜನರಿಗೆ ಡ್ರೈವಿಂಗ್ ತರಬೇತಿ ಮತ್ತು ಲೈಸೆನ್ಸ್ ಪತ್ರ, ಕುತ್ಲೂರು ಶ್ರೀದೇವಿ ಕೃಪಾದಲ್ಲಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ರಾಮಚಂದ್ರ ಭಟ್ ಕುಕ್ಕುಜೆ, ಯೋಜನೆಗಳ ಬಗ್ಗೆ ತಿಳಿಸಿ ಸ್ವಾಗತಿಸಿದರು. ಉಪಕರಣಗಳನ್ನು ವಿತರಿಸಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಡಬ್ಲ್ಯೂ ಸಿ ಎಸ್ ಸಂಸ್ಥೆಗೆ ಅಭಿನಂದಿಸಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಪೂಜಾರಿ ಕೃಷಿ ಉಪಕರಣಗಳನ್ನು ಸದುಪಯೋಗ ಮಾಡಿ ಕೃಷಿಯಲ್ಲಿ ಮುಂದುವರಿಯಬೇಕೆಂದು ತಿಳಿಸಿದರು.

ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವೇಣೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ನಿರಂಜನ್, ಪ್ರಗತಿಪರ ಕೃಷಿಕರಾದ ಮುನಿರಾಜ್ ಜೈನ್, ಅಭಿಜಿತ್, ಸಂಸ್ಥೆಯ ರವಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಡಬ್ಲ್ಯೂ.ಸಿ.ಎಸ್ ಸಂಸ್ಥೆಯನ್ನು ಫಲನುಭವಿಗಳಾದ ದೇವಪ್ಪ ಮಲೆಕುಡಿಯ ನೂರಾಳ್ ಬೆಟ್ಟು, ಶ್ರೀಮತಿ ಅಮಿತ ನಾಯ್ಕ ಕುತ್ಲೂರು ಅಭಿನಂದಿಸಿದರು. ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಧರ್ಣಪ್ಪ ಧನ್ಯವಾದವಿತ್ತರು.

Related posts

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಕೊಕ್ಕಡ ಗ್ರಾ.ಪಂ. ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಶಿಕ್ಷು ತರಬೇತಿ ಮಾಹಿತಿ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು : ಪ್ರೇಮಾ ಅವರಿಗೆ “ವಾತ್ಸಲ್ಯ” ಮನೆ ಹಸ್ತಾಂತರ

Suddi Udaya
error: Content is protected !!