27.8 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಶಾಲೆಯಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅಲ್ಲದೆ ಕೊಡುಗೆ ನೀಡಿದ ಮಕ್ಕಳ ತೂಗು ಉಯ್ಯಾಲೆಯನ್ನು ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಶೆಟ್ಟಿ ಯವರು ವಹಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಕೆ ಇವರು ಕೊಡುಗೆ ನೀಡಿದ ನಲಿ-ಕಲಿ ಟೇಬಲನ್ನು ಡಾ / ವೇಣುಗೋಪಾಲ ಶರ್ಮ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಯಾದ ವಿರುಪಾಕ್ಷಪ್ಪ ಎಚ್ ಎಸ್ ಶುಭ ಹಾರೈಸಿದರು. ಕುವೆಟ್ಟು ಗ್ರಾಮ ಕರಣಿಕ ನಾರಾಯಣ ಕುಲಾಲ್, ಬೆಳ್ತಂಗಡಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಪ್ರಾ ಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ ಜೈನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರವಿರಾಜ ಗೌಡ, ಗುರುವಾಯನಕೆರೆ ಮತ್ತು ಪುಂಜಾಲಕಟ್ಟೆ ವಲಯದ ಸಂಯೋಜಕ ನಿರಂಜನ್, ಗುರುವಾಯನಕೆರೆ ಕ್ಲಸ್ಟರ್ ಸಿ. ಆರ್.ಪಿ ರಾಜೇಶ್, ಪುಂಜಾಲಕಟ್ಟೆ ಸಿ. ಆರ್. ಪಿ ಶ್ರೀಮತಿ ಚೇತನ, ಬೆಳ್ತಂಗಡಿ ಶಾಮಿಯಾನ ಘಟಕದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಮಕ್ಕಳ ತೂಗುಯ್ಯಾಲೆ ಕೊಡುಗೆ ನೀಡಿದ ಗುರುವಾಯನಕೆರೆ ಸುಪ್ರೀಂ ಮಾರ್ಟ್ ಮಾಲಕರಾದ ಜಬ್ಬಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಮುಸ್ತಾಪ, ಹಾಗೂ ಶಮಿ ಮುಲ್ಲಾ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಪ್, ಪಿಲಿಚಂಡಿಕಲ್ಲು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮುಸ್ತಾಫ ಉಪಸ್ಥಿತರಿದ್ದರು.

ಹಾಜಿ ಅಬ್ದುಲ್ ಲತೀಫ್ ಇವರು ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಉಮಾ .ಯನ್ ಧನ್ಯವಾದವಿತ್ತರು. ನಿರೂಪಣೆಯನ್ನು ದೈಹಿಕ ಶಿಕ್ಷಕ ಅಜಿತ್ ಜೈನ್ ಇವರು ನೆರವೇರಿಸಿದರು.

ಸಮಾರೋಪ ಸಮಾರಂಭದಲ್ಲಿ ಮಡಂತ್ಯಾರ್ ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀಧರ್ ರಾವ್ ಪೇಜಾವರ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಶುಭ ಹಾರೈಸಿದರು. ಕುವೆಟ್ಟು ಎಸ್.ಡಿ.ಎಂಸಿ ಅಧ್ಯಕ್ಷ ಸಿರಾಜುದ್ದೀನ್, ಪುಂಜಾಲಕಟ್ಟೆ ಸಿ ಆರ್ ಪಿ ಚೇತನ ರವರು ಉಪಸ್ಥಿತರಿದ್ದರು.

ಬಾಲಕರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಸರಕಾರಿ.ಉ. ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ಪ್ರಥಮ ಸ್ಥಾನವನ್ನು ಪಡೆದರು. ದ್ವಿತೀಯ ಸ್ಥಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅoಡೆತಡ್ಕ ಪಡೆದರು. ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಆಂಗ್ಲ ಮಾಧ್ಯಮ ಶಾಲೆ ಸೈಂಟ್ ಮೇರಿ ಲಾಯಿಲ ಬೆಳ್ತಂಗಡಿ, ದ್ವಿತೀಯ ಸ್ಥಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಪಡೆದರು. ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ ಅತಿಥಿಗಳು ಟ್ರೋಫಿ ಯನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ದವರು, ತಾಲ್ಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಮಾ ಎನ್ ಸ್ವಾಗತಿಸಿ, ಪುಂಜಾಲಕಟ್ಟೆ ಪ್ರೌಢಶಾಲಾ ಶಿಕ್ಷಕರಾದ ಧರಣೆoದ್ರ ಜೈನ್ ಇವರು ಧನ್ಯವಾದವಿತ್ತರು.

ಈ ಕಾರ್ಯಕ್ರಮಕ್ಕೆ ಅಡುಗೆ ಸಿಬ್ಬಂದಿ, ಪೋಷಕರು, ಎಸ್ ಡಿ.ಎಂ.ಸಿ ಸದಸ್ಯರು, ತಾಯಂದಿರ ಸಮಿತಿ, ಹಿರಿಯ ವಿದ್ಯಾರ್ಥಿಗಳು, ಊರಿನವರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ಬೆಳ್ತಂಗಡಿ ವಲಯದ ಪೂರ್ವಭಾವಿ ಸಭೆ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಬೆಳ್ತಂಗಡಿ ದಾರುಸ್ಸಲಾಂ ದುಅ್’ವಾ ಕಾಲೇಜಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ಕರಾಟೆ ಚಾಂಪಿಯನ್ ಶಿಪ್: ಸೇಕ್ರೆಡ್ ಹಾರ್ಟ್ ಆಂ. ಮಾ. ಶಾಲೆಯ ವಿದ್ಯಾರ್ಥಿ ಫ್ಲಾಯಿಡ್ ಮಿಸ್ಕಿತ್ ದ್ವಿತೀಯ ಸ್ಥಾನ

Suddi Udaya
error: Content is protected !!