24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕ್ಕಾಗಿ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ: ಪ್ರತಾಪಸಿಂಹ ನಾಯಕ್


ಪತ್ರಿಕಾಗೋಷ್ಠಿ
ಬೆಳ್ತಂಗಡಿ: ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದೆ. ಬಹಳ ನೀರಿಕ್ಷೆಯಲ್ಲಿ ಜನರು ಈ ಸರಕಾರವನ್ನು ಆಡಳಿತಕ್ಕೆ ತಂದಿದ್ದರು. ಆದರೆ ಅತ್ಯಂತ ಸಣ್ಣ ಅವಧಿಯಲ್ಲಿ ಜನತೆಯ ವಿಶ್ವಾಸವನ್ನು ಈ ಸರಕಾರ ಕಳೆದುಕೊಂಡು, ನೀಡಿದ ಭರವಸೆ ನುಚ್ಚುನೂರಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ ಎಂದು ಹೇಳುವ ಸರಕಾರ ಇವತ್ತು ತನ್ನ ರಾಜಕೀಯದ ಲಾಭದ ಗ್ಯಾರಂಟಿ ಯೋಜನೆಗಳಿಗೆ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ ಎಂದು ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.


ಅವರು ಸೆ.26 ರಂದು ಶಾಸಕರ ಶ್ರಮಿಕ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸುಮಾರು ಒಂದು ಸಾವಿರ ಮದ್ಯದಂಗಡಿಗಳನ್ನು ರಾಜ್ಯದ ಉದ್ದಗಲಕ್ಕೆ ಪಂಚಾಯತು ಮಟ್ಟದಲ್ಲಿ ತೆರೆಯುವುದರ ದಿಕ್ಕಿನಲ್ಲಿ ಸರಕಾರ ಹೆಜ್ಜೆ ಇಟ್ಟಿದೆ. ಕಾವೇರಿಯ ನೀರು ವ್ಯವಹರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿ, ರಾಜ್ಯದ ಜನರಿಗೆ ಕುಡಿಯುವ ನೀರು ಹಾಗೂ ರೈತರ ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲದ ಎಂಬ ಪರಿಸ್ಥಿಯನ್ನು ಸರಕಾರ ನಿರ್ಮಿಸಿದೆ, ಇವತ್ತು ನೀರಿನ ಬದಲಿಗೆ ಮದ್ಯವನ್ನು ಮನೆ, ಮನೆಗೆ ಹಂಚುವಂತಹ, ದಿಕ್ಕಿನಲ್ಲಿ ಸರಕಾರ ಹೆಜ್ಜೆ ಇರಿಸಿದೆ. ಮಹಾತ್ಮಗಾಂಧಿಜೀಯವರ ಹೆಸರಿನಲ್ಲಿ ದಿನ ತೆಗೆಯುತ್ತಿರುವ ಕಾಂಗ್ರೆಸ್‌ಗೆ ಅವ ಹೆಸರು ಮಾತ್ರ ಬೇಕೆ ಹೊರತು, ಅವರ ವಿಚಾರವಾಗಲಿ, ಜನಸಾಮಾನ್ಯರ ಬಗ್ಗೆ ಕಾಳಜಿಯಾಗಲಿ ಇಲ್ಲ ಎಂಬುದು ಇವರ ಮದ್ಯದಂಗಡಿಯ ವ್ಯವಹಾರ ತೋರಿಸುತ್ತಾ ಇದೆ ಎಂದು ಆರೋಪಿಸಿದರು.


ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ತಪ್ಪು ದಾರಿಗೆ ಕೊಂಡೋಗಿ ಈಗ ಆರ್ಥಿಕವಾಗಿ, ಈ ಹೊರೆಯನ್ನು ಭರಿಸಲು ಆಗದೆ ಒಂದು ಕಡೆಯಿಂದ ಅಭಿವೃದ್ಧಿ ಸ್ಥಗಿತಕೊಂಡಿದ್ದರೆ, ಇನ್ನೊಂದು ಕಡೆಯಿಂದ ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಂದಾಣಿಕೆಗೆ ಶರಾಬಿನ ವ್ಯವಹಾರನ್ನು ಪ್ರಾರಂಭ ಮಾಡಿರುವಂತದು ಅವರ ನೈತಿಕ ದಿವಾಳಿತನಕ್ಕೆ ಇದು ಸಾಕ್ಷಿಯಾಗಿದೆ ಎಂದರು.


ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಬರಪರಿಸ್ಥಿತಿ ಇದೆ. ವಿದ್ಯುತ್ ಉತ್ಪಾದನೆಯ ಕೊರತೆ ಇದೆ. ಈ ಯಾವುದೇ ಜನರ ಸಮಸ್ಯೆಗಳಿಗೆ ಸ್ಪಂದನೆ ಕೊಡುವಂತಹ ದಿಕ್ಕಿನಲ್ಲಿ ಸರಕಾರ ಯಾವುದೇ ಪೂರ್ವ ತಯಾರಿ ಮಾಡದೇ, ಈಗ ಎಷ್ಟು ಉಪಮುಖ್ಯಂತ್ರಿಗಳು ಬೇಕೆಂಬ ಚರ್ಚೆ ನಡೆಯುತ್ತಿದೆ. ಒಂದು ವರದಿ ಪ್ರಕಾರ ಮೂರರಿಂದ ಆರರತನಕ ಉಪಮುಖ್ಯಮಂತ್ರಿ ಮಾಡುವ ದಿಕ್ಕಿನಲ್ಲಿ ಅವರದೇ ಪಕ್ಷದ ಶಾಸಕರುಗಳು ಮಾತನಾಡುವುದು, ನೋಡುವಾಗ ಪಕ್ಷದ ಹಾಗೂ ಸರಕಾರದ ಒಳಗೆ ಅಧಿಕಾರದ ಕಿತ್ತಾಟ ಎಷ್ಟುರ ಮಟ್ಟಿಗೆ ಇದೆ ಎಂಬುದನ್ನು ಕಾಂಗ್ರಸ್‌ನ ಈ ನಡವಳಿಕೆ ತೋರಿಸುತ್ತಿದೆ ಎಂದರು.


ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಜಗತ್ತು ಮೆಚ್ಚುವಂತಹ ಸಾಧನೆಗಳನ್ನು ಮಾಡುತ್ತಾ ಇದ್ದರೆ, ಒಂದು ಕಡೆಯಿಂದ ವಿಶ್ವವೇ ಮೆಚ್ಚುವಂತಹ ಚಂದ್ರಯಾನ, ಇನ್ನೊಂದು ಕಡೆ ಜಿ.20ಯ ಸಫಲತೆಯ ಮೂಲಕ ಇಡೀ ಜಗತ್ತಿಗೆ ನೇತೃತ್ವ ಕೊಡಬಲ್ಲಂತಹ ಸಾಮರ್ಥವನ್ನು ತೋರಿಸುತ್ತಾ, ಭಾರತದ ಅಭಿವೃದ್ಧಿ, ಸಾಂಸ್ಕೃತಿಕ ವೈಭವನ್ನು ಜಗತ್ತಿಗೆ ಪರಿಚಯಿಸಿದರೆ, ಕರ್ನಾಟಕ ಸರಕಾರ ಸಂಪೂರ್ಣ ವಿಫಲವಾಗಿ ಮದ್ಯಮಾರಾಟ ಮಾಡುವ ದಯನೀಯ ಸ್ಥಿತಿಗೆ ಬಂದಿರುವಂತದು ಜನಸಾಮಾನ್ಯರಲ್ಲಿ ಈ ಸರಕಾರದ ಬಗ್ಗೆ ಭ್ರಮನಿರಸ ತಂದಿದೆ.
ಜನ ಇದೆಲ್ಲದಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಮತ್ತು ಕೇಂದ್ರ ಸರಕಾರದ ಪರವಾಗಿ ತಮ್ಮ ಮತದಾನ ಮೂಡುವುದರ ಉತ್ತರ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya

ಕೊಕ್ರಾಡಿ: ಹೇರ್ದಂಡಿ ಬಾಕ್ಯಾರು ಗರಡಿಗೆ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಭೇಟಿ,

Suddi Udaya

ಶ್ರೀರತ್ನಾತ್ರಯ ಜೈನ ಸಂಘ ದಿಂದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ: ಜೈನ ಧರ್ಮೀಯರಿಗೆ ಪ್ರತ್ಯೇಕ ನಿಗಮ ರಚನೆ ಸಚಿವರ ಭರವಸೆ

Suddi Udaya

ಎ.25-26: ಸಂತಾನ ಪ್ರದಾ ನಾಗಕ್ಷೇತ್ರ ಕಟ್ಟದಬೈಲು ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಸ್ಟಾರ್ ಲೈನ್ ಮಂಜೊಟ್ಟಿ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ಶರೀಫ್ ತೃತೀಯ ಸ್ಥಾನ

Suddi Udaya

ಮುಂಡೂರು: ದುರ್ಗಾ ನಗರ ನಿವಾಸಿ ಕಾರ್ತಿಕ್ ಹೆಗ್ಡೆ ನಿಧನ

Suddi Udaya
error: Content is protected !!