32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

ಉಜಿರೆ: ಧರ್ಮಸ್ಥಳದಲ್ಲಿ25 ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.28 ರಿಂದ ಅಕ್ಟೋಬರ್ 4 ರ ವರೆಗೆ ನಡೆಯಲಿದೆ.
ಗುರುವಾರ ಪೂರ್ವಾಹ್ನ 11 ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟವನ್ನು ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು.


ಸಮಾರೋಪ ಸಮಾರಂಭ: ಅಕ್ಟೋಬರ್ 4 ರಂದು ಬುಧವಾರ ಪೂರ್ವಾಹ್ನ ಹನ್ನೊಂದು ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಚಲನಚಿತ್ರ ನಿರ್ದೇಶಕ ಇಳೈಯರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹುಬ್ಬಳ್ಳಿ ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು.
ಬುಧವಾರ ಬೆಳಿಗ್ಗೆ ಒಂಭತ್ತು ಗಂಟೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಯ್ದ ಭಜನಾ ಮಂಡಳಿಗಳ ಮುನ್ನೂರು ಭಜನಾ ತಂಡಗಳ ಐದು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ನೃತ್ಯ ಭಜನೆ ನಡೆಯಲಿದೆ.
ಭಜನಾ ತರಬೇತಿ ಕಮ್ಮಟದ ಸಂದರ್ಭ ಪ್ರತಿದಿನ ಸಂಜೆ ಗಂಟೆ 5.30 ರಿಂದ ಶಿಬಿರಾರ್ಥಿಗಳಿಂದ ನಗರ ಭಜನೆ ಕಾರ್ಯಕ್ರಮವಿದೆ.
ಪ್ರತಿದಿನ ರಾತ್ರಿ ಗಂಟೆ 7.30 ರಿಂದ ಸಾಂಸ್ಕಂತ್ರಿಕ ಕಾರ್ಯಕ್ರಮಗಳಿವೆ.


ಸಂಪನ್ಮೂಲ ವ್ಯಕ್ತಿಗಳು: ಕಾರ್ಯಾಗಾರದಲ್ಲಿ ಖ್ಯಾತ ಗಾಯಕರಾದ ಬೆಂಗಳೂರಿನ ಶಂಕರ್ ಶ್ಯಾನ್‌ಬಾಗ್ ಮತ್ತು ಎಂ.ಎಸ್. ಗಿರಿಧರ್, ಕಾಸರಗೋಡಿನ ರಾಮಕೃಷ್ಣ ಕಾಟುಕುಕ್ಕೆ, ಮಣಿಪಾಲದ ಉಷಾ ಹೆಬ್ಬಾರ್, ಉಡುಪಿಯ ಸಂಗೀತಾ ಬಾಲಚಂದ್ರ, ಧರ್ಮಸ್ಥಳದ ಮನೋರಮಾ ತೋಳ್ಪಾಡಿತ್ತಾಯ, ಸುನಿಲ್ ಶೆಟ್ಟಿ, ಸೌಮ್ಯ ಸುಭಾಷ್, ಮಂಗಲದಾಸ ಗುಲ್ವಾಡಿ, ಎಂ. ನಾಗೇಶ್ ಶೆಣೈ, ರವಿರಾಜ್ ಉಜಿರೆ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ, ಕುಮಾರಿ ಚೈತ್ರಾ ಮತ್ತು ಕುಮಾರಿ ಮಾಧವಿ, ಎಂ.ಎಸ್. ಹಾಗೂ ಡಾ. ಶಶಿಕಾಂತ್ ಜೈನ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡುವರು.

Related posts

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಸಾಹಸ ಪ್ರವಾಸಿ ತಾಣ ಪ್ರಶಸ್ತಿ ಗೆದ್ದ ಕುತ್ಲೂರು ಗ್ರಾಮದ ಪ್ರತಿನಿಧಿಗಳಿಗೆ ಗೌರವಾರ್ಪಣೆ

Suddi Udaya

ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.45 ಸಾವಿರ ಮೌಲ್ಯದ ಎಂಡಿಎಂಎ ಪತ್ತೆ – ಮೂವರ‌ ಬಂಧನ

Suddi Udaya

ಕಾಂಗ್ರೇಸ್ ನಾಯಕ ಜಿನ್ನಪ್ಪ ಪೂಜಾರಿ ಕಾಪಿನಡ್ಕ ಬಿಜೆಪಿ ಸೇರ್ಪಡೆ

Suddi Udaya

ಬಟ್ಟೆಗಳ ಬೃಹತ್ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ ಶೇ.10 ಡಿಸ್ಕೌಂಟ್ ಸೇಲ್

Suddi Udaya

ತೆಂಕಕಾರಂದೂರು: ಕಟ್ಟೆಯ ಸಾರ್ವಜನಿಕ ಬಸ್ಸು ತಂಗುದಾಣ ಕುಸಿತ

Suddi Udaya

ಚಿತ್ರಕಲಾ ಪರೀಕ್ಷೆ :ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!