ಧರ್ಮಸ್ಥಳ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯುಷ್ಮಾನ್ ಭವ ಆರೋಗ್ಯ ಸೇವೆಗೆ ಚಾಲನೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ವಿಮಲಾ ಚಾಲನೆ ನೀಡಿದರು.
ಅಭಿಯಾನದ ಮಾದರಿಯಲ್ಲಿ ಸಮುದಾಯಕ್ಕೆ ಆರೋಗ್ಯ ಸೇವೆಯನ್ನು ಸಂಪೂರ್ಣವಾಗಿ ತಲುಪುವ ಬಗ್ಗೆ ಈ ಸೇವೆಯನ್ನು ಮಾಡಲಾಗಿದೆ. ಧರ್ಮಸ್ಥಳ ಗ್ರಾಮದ ಎಲ್ಲಾ ವಾರ್ಡ್ ಗಳಲ್ಲಿ ಎಲ್ಲಾ ಕುಟುಂಬಗಳಿಗೆ, ಅಂಗನವಾಡಿ, ಶಾಲೆ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಗ್ರಾಮದ ಆರೋಗ್ಯ ಸೇವೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವಂತಹ ವೈದ್ಯರು ಸಿಬ್ಬಂದಿ ವರ್ಗ ಅವರಿಗೆ ಪಂಚಾಯತಿ ಉಪಾಧ್ಯಕ್ಷ ಪಿ ಶ್ರೀನಿವಾಸ್ ರಾವ್ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯಿತಿ ಅಧ್ಯಕ್ಷರಾದ , ಸದಸ್ಯರಾದ ಶ್ರೀಮತಿ ಜಯ ಮೋನಪ್ಪಗೌಡ, ಶ್ರೀರಾಮಚಂದ್ರರಾವ್, ವಸಂತ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಕಾರ್ಯದರ್ಶಿ ದಿನೇಶ್ ಯಂ,ಲೆಕ್ಕ ಸಹಾಯಕರಾದ ಶ್ರೀಮತಿ ಪ್ರಮೀಳಾ, ಕನ್ಯಾಡಿ ಆರೋಗ್ಯ ಉಪ ಕೇಂದ್ರದ ಆರೋಗ್ಯ ಪರಿವೀಕ್ಷಕರಾದ ಶ್ರೀಮತಿ ಆನ್ಸಿ ಮೇರಿ, ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಅಧಿಕಾರಿ ಡಾ. ಮಂಜು, ಹಿರಿಯ ಅರೋಗ್ಯ ಸಹಾಯಕಿ ಶ್ರೀಮತಿ ಸೀತಮ್ಮ, ಸಾಕೇತ ಮ್ಯಾನೇಜರ್ ಶ್ರೀಧರ ಶೆಟ್ಟಿ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.