23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ನಿತ್ಯಾನಂದ ನಾವರರವರು ಒಂದೇ ದಿನದಲ್ಲಿ112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ

ಬೆಳ್ತಂಗಡಿ: ಭಾರತೀಯ ಜೀವವಿಮಾ ನಿಗಮ ಮಂಗಳೂರು ಶಾಖೆ 1 ರ ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಕೃಷ್ಣ ಎಂ ಹೆಗಡೆಯವರ ಯೂನಿಟಿನ ಪ್ರತಿನಿಧಿಯಾಗಿರುವ ನಿತ್ಯಾನಂದ ನಾವರ ಇವರು ಒಂದೇ ದಿನದಲ್ಲಿ 112 ಜೀವ ವಿಮಾ ಪಾಲಿಸಿಗಳನ್ನುಮಾಡಿ ಒನ್ ಡೇ ಸೆಂಚುರಿಯನ್ ಎಂಬ ಸಾಧನೆಯನ್ನು ಈ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗದಲ್ಲೇ ಪ್ರಥಮವಾಗಿ ಮಾಡಿರುತ್ತಾರೆ.

ಇವರು ಉಜಿರೆಯಲ್ಲಿ ಎನ್ ಎನ್ ಬಾಟಲಿಂಗ್ ಕಂಪನಿ ಉದ್ಯಮವನ್ನು ನಡೆಸುತ್ತಿದ್ದು, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಪ್ರಾಂತ್ಯ ಅಧ್ಯಕ್ಷರಾಗಿದ್ದು, ಪ್ರಸ್ತುತ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಡಾಕ್ಟರ್ ಮೇಲ್ವಿನ್ ಡಿಸೋಜಾ ರವರ ಸಂಪುಟದಲ್ಲಿ ಜಿಎಸ್‌ಟಿ ಸಹ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲ.ನಿತ್ಯಾನಂದ ನಾವರರವರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅಧ್ಯಕ್ಷರಾಗಿ, ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಕೋಶಾಧಿಕಾರಿಯಾಗಿ,ಯುವವಾಹಿನಿ ಬೆಳ್ತಂಗಡಿ ಘಟಕ ಇದರ ಗೌರವ ಸಲಹೆಗಾರರಾಗಿ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ನಿಡ್ಲೆ: ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಹಾಗೂ ವನಭೋಜನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

Suddi Udaya

ಇಂದಬೆಟ್ಟು: ದಿ| ತುಷಾರ್ ರವರ ನುಡಿನಮನ ಕಾರ್ಯಕ್ರಮದಲ್ಲಿ ರೂ.40,305 ಉಳಿಕೆ ಮೊತ್ತವನ್ನು ನಂದಗೋಕುಲ ಗೋಶಾಲೆಗೆ ಹಸ್ತಾಂತರ

Suddi Udaya

ಇಂದಬೆಟ್ಟಿನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ

Suddi Udaya

ದಾಮೋದರ ಶೆಟ್ಟಿಅನಾರೋಗ್ಯದಿಂದ ನಿಧನ

Suddi Udaya
error: Content is protected !!