ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಅಂಗಡಿ/ ಹೋಟೆಲ್/ ವ್ಯಾಪಾರಸ್ಥರು/ ಸಂಘ ಸಂಸ್ಥೆಗಳಿಗೆ ಮತ್ತು ಶ್ರೀ ಕ್ಷೇತ್ರದ ಅಧಿಕಾರಿ/ ನೌಕರರಿಗೆ ಮಾಹಿತಿ ಕಾರ್ಯಗಾರ ಸೆ.27 ರಂದು ನಡೆಯಿತು.
ಕಾರ್ಯಗಾರದಲ್ಲಿ ಗ್ರಾಮ ಪಂಚಾಯಿತಿನ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಎಲ್ಲಾ ಅಂಗಡಿ ಹೋಟೆಲ್ ಮಾಲಕರು ಶ್ರೀ ಕ್ಷೇತ್ರದ ನೌಕರರ ವರ್ಗ ಸಂಘ ಸಂಸ್ಥೆಗಳು ಉಪಸ್ಥಿತರಿದ್ದರು. ಕಾರ್ಯಾಗಾರವನ್ನು ಕುಸುಮಾಧರ ಕಾರ್ಯನಿರ್ವಹಣಾಧಿಕಾರಿಯವರು ತಾಲೂಕು ಪಂಚಾಯಿತಿ ಬೆಳ್ತಂಗಡಿ ಇವರು ಚಾಲನೆ ನೀಡಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಮಹತ್ವ ಮತ್ತು ಸ್ವಚ್ಛತೆಯ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ್ ಆರ್ ಅಂಚನ್ ಹಸಿರು ದಳ ಮಂಗಳೂರು , ಡೊoಬಯ್ಯ ಜಿಲ್ಲಾ ಸಂಯೋಜಕರು ಸ್ವಚ್ಛ ಭಾರತ ಮಿಷನ್ ದ. ಕ ಜಿ. ಪ ಮಂಗಳೂರು ಇವರು ಭಾಗವಹಿಸಿದರು . ಪ್ರಶ್ನೋತ್ತರ ಕಾರ್ಯಕ್ರಮ ಏಕಬಳಕೆಯ ಪ್ಲಾಸ್ಟಿಕ್ ನ ಬಗ್ಗೆ ಪರ್ಯಾಯ ಮಾರ್ಗೋಪಾಯವನ್ನು ತಿಳಿಸಿದರು. ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.