ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ವೈಲ್ಡ್ ಲೈಫ್ ಕನ್ಸ್ ವೇಶನ್ ಸೊಸೈಟಿ ಇಂಡಿಯ ಬೆಂಗಳೂರು ಇವರ ನೇತೃತ್ವದಲ್ಲಿ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯು ಕೊಯ್ಯುರು ಡೆಂಬುಗ ರಾಮಣ್ಣ ಗೌಡರ ಮನೆಯಲ್ಲಿ ನಡೆಯಿತು.
ಅವರ ಮಗನಾದ ಸತೀಶ್ ತರಬೇತಿ ನೀಡಿದರು. ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಕೆ.ರಾಮಚಂದ್ರ ಭಟ್ ಸ್ವಾಗತಿಸಿ ಮಲ್ಲಿಗೆಯ ಕೃಷಿಯ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಹದಿನೈದು ಮಹಿಳೆಯರು ಭಾಗವಹಿಸುವ ಮೂಲಕ ಪ್ರಾತ್ಯಕ್ಷಿಕೆ ಅನುಭವ ಪಡೆಯುವ ಮೂಲಕ ತರಬೇತಿ ಪಡೆದರು. ನಾರಾವಿ ಕುತ್ಲೂರು. ಸುಲ್ಕೇರಿ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.