ಧರ್ಮಸ್ಥಳ: ಧರ್ಮಸ್ಥಳದಲ್ಲಿ25ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.28 ರಿಂದ ಪ್ರಾರಂಭಗೊಂಡು ಅಕ್ಟೋಬರ್ 4 ರವರೆಗೆ ನಡೆಯಲಿದೆ.
ಇಂದು ಮಹೋತ್ಸವ ಸಭಾಭವನದಲ್ಲಿ ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟವನ್ನು ಉದ್ಘಾಟಿಸುವ ಮೂಲಕ ಭಜನಾ ತರಬೇತಿ ಕಮ್ಮಟಕ್ಕೆ ಚಾಲನೆಯನ್ನು ನೀಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು.
ಸುಪ್ರೀತಾ ಮತ್ತು ವಚ೯ಸ್ಸು ಇವರ ಪ್ರಾಥ೯ನೆ ಹಾಗೂ ವಿದುಷಿ ಚೈತ್ರ ಧಮ೯ಸ್ಥಳ ಮತ್ತು ತಂಡದವರ ನೃತ್ಯ ರೂಪಕದ ಪ್ರಾಥ೯ನೆ ಬಳಿಕ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾಯ೯ದಶಿ೯ ಸುರೇಶ್ ಮೊಯ್ಲಿ ವರದಿ ವಾಚಿಸಿದರು. ಯೋಜನಾಧಿಕಾರಿ ಶ್ರೀನಿವಾಸ್ ಕಾಯ೯ಕ್ರಮ ನಿರೂಪಿಸಿದರು. ಭಜನಾ ಪರಿಷತ್ ಕಾಯ೯ದಶಿ೯ ಪುರುಷೋತ್ತಮ ಪಿ.ಕೆ ವಂದಿಸಿದರು. ಡಾ. ಐ. ಶಶಿಕಾಂತ್ ಜೈನ್ ಸ್ವಸ್ತಿ ಮಂತ್ರ ಪಠಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಗಾಯಕರಾದ ಬೆಂಗಳೂರಿನ ಶಂಕರ್ ಶ್ಯಾನ್‌ಬಾಗ್ ಮತ್ತು ಎಂ.ಎಸ್. ಗಿರಿಧರ್, ಕಾಸರಗೋಡಿನ ರಾಮಕೃಷ್ಣ ಕಾಟುಕುಕ್ಕೆ, ಮಣಿಪಾಲದ ಉಷಾ ಹೆಬ್ಬಾರ್, ಉಡುಪಿಯ ಸಂಗೀತಾ ಬಾಲಚಂದ್ರ, ಧರ್ಮಸ್ಥಳದ ಮನೋರಮಾ ತೋಳ್ಪಾಡಿತ್ತಾಯ, ಸುನಿಲ್ ಶೆಟ್ಟಿ, ಸೌಮ್ಯ ಸುಭಾಷ್, ಮಂಗಲದಾಸ ಗುಲ್ವಾಡಿ, ಎಂ. ನಾಗೇಶ್ ಶೆಣೈ, ರವಿರಾಜ್ ಉಜಿರೆ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ, ಕುಮಾರಿ ಚೈತ್ರಾ ಮತ್ತು ಕುಮಾರಿ ಮಾಧವಿ, ಎಂ.ಎಸ್. ಹಾಗೂ ಡಾ. ಶಶಿಕಾಂತ್ ಜೈನ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡುವರು.
ಭಜನಾ ತರಬೇತಿ ಕಮ್ಮಟದ ಸಂದರ್ಭ ಪ್ರತಿದಿನ ಸಂಜೆ ಗಂಟೆ 5.30 ರಿಂದ ಶಿಬಿರಾರ್ಥಿಗಳಿಂದ ನಗರ ಭಜನೆ ಕಾರ್ಯಕ್ರಮವಿದೆ.
ಪ್ರತಿದಿನ ರಾತ್ರಿ ಗಂಟೆ 7.30 ರಿಂದ ಸಾಂಸ್ಕತ್ರಿಕ ಕಾರ್ಯಕ್ರಮಗಳು ನಡೆಯಲಿದೆ.