24.3 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ: ಉಜಿರೆ ನಗರದಲ್ಲಿ ಜಾಗೃತಿ ರ‍್ಯಾಲಿ

ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಜೌಷಧಿ ತಜ್ಞರ ದಿನಾಚರಣೆಯನ್ನು ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀಧರ್ ಕೆ. ವಿ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ರಸಾಯನಶಾಸ್ತ್ರ ಮತ್ತು ವಿಶ್ವ ಔಷಧ ತಜ್ಞರ ದಿನದ ಮಹತ್ವವನ್ನು ತಿಳಿಯಪಡಿಸಿದರು. ಇನ್ನೋರ್ವ ಅತಿಥಿ ಡಾ| ಪ್ರಶಾಂತ್ ಬಿ. ಕೆ ಪ್ರಾಂಶುಪಾಲರು ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಹಾಗೂ ಹಾಸ್ಪಿಟಲ್ ಇವರು ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು.

ಪ್ರಸನ್ನ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಎಂ. ಮಲ್ಲಿಕಾರ್ಜುನ್ ಗೌಡ ಫಾರ್ಮಸಿ ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜ ಆರೋಗ್ಯ ವಿಭಾಗದಲ್ಲಿ ಯಾವ ಯಾವ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂಬುದಾಗಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಪ್ರಸನ್ನ ಸಿ.ಬಿ.ಎಸ್.ಇ ರೆಸಿಡೆನ್ಸಿಯಲ್ ಸ್ಕೂಲಿನ ಪ್ರಾಂಶುಪಾಲರಾದ ಕೆ. ಎಸ್.ಎನ್ ಭಟ್ ಉಪಸ್ಥಿತರಿದ್ದರು. ಈ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಉಜಿರೆಯಲ್ಲಿ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು, ಇದರ ಚಾಲನೆಯನ್ನು ಪ್ರಸನ್ನ ಆಡಳಿತ ಅಧಿಕಾರಿಯಾದ ಕಿರಣ್ ಹೆಬ್ಬಾರ್ ನಡೆಸಿಕೊಟ್ಟರು.

Related posts

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರಿಂದ ಮುಂಬಯಿ ಬಿಲ್ಲವ ಸಮುದಾಯ ಭವನ, ಗುರುಮಂದಿರ ಉದ್ಘಾಟನೆ

Suddi Udaya

ಚಲನಚಿತ್ರ ತಾರೆ ಡಿಂಪಲ್‌ ಕಪಾಡಿಯಾ ಧರ್ಮಸ್ಥಳ ಭೇಟಿ

Suddi Udaya

ಮಚ್ಚಿನ ಸ. ಪ್ರೌ.ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಆ. 12: ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೆಂಗಳೂರು ಚಲೋ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಸೀಲ್ದಾರ್ ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರ ಮೂಲಕ ಸರಕಾರಕ್ಕೆ ಮನವಿ

Suddi Udaya

ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ

Suddi Udaya
error: Content is protected !!