ಬೆಳ್ತಂಗಡಿ: ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇವರ ವತಿಯಿಂದ ಜಾನುವರಗಳಿಗೆ ನಾಲ್ಕನೇ ಸುತ್ತಿನ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕಾ ಅಭಿಯಾನದ ಚಾಲನೆ, ಪಶು ಸಖಿಯವರಿಗೆ ಇಲಾಖೆಯಿಂದ ಕಿಟ್ ವಿತರಣೆ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಸೆ.30ರಂದು ಶನಿವಾರದಂದು ಬೆಳಿಗ್ಗೆ 10ಗಂಟೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಹರೀಶ್ ಪೂಂಜ ಶಾಸಕರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು , ಕೆ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯರು, ಡಾ. ಅರುಣ್ ಕುಮಾರ್ ಶೆಟ್ಟಿ ಉಪನಿರ್ದೇಶಕರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧಿಕಾರಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಹೈನುಗಾರಿಕೆಗೆ ಉಪಯುಕ್ತವಾದ ರಬ್ಬರ್ ಮ್ಯಾಟ್ ವಿತರಣೆ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯಿತಿಯ ಪಶುಸಖಿಯವರಿಗೆ ಪಶು ಪಾಲನ ಇಲಾಖೆಯಿಂದ ಉಚಿತವಾಗಿ ಕಿಟ್ ವಿತರಣೆ ನಡೆಯಲಿದೆ ಎಂದು ಡಾ. ಜಯಕೀರ್ತಿ ಜೈನ್ ತಿಳಿಸಿದ್ದಾರೆ.