September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸೇವಾ ಟ್ರಸ್ಟ್ ಇದರ ವತಿಯಿಂದ ತಾಲೂಕಿನ ಬಡಕುಟುಂಬದ ಪ್ರತಿಭಾನ್ವಿತ 145 ವಿದ್ಯಾರ್ಥಿಗಳಿಗೆ ರೂ.10.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ : ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸೇವಾ ಟ್ರಸ್ಟ್ ಇದರ ವತಿಯಿಂದ ತಾಲೂಕಿನ ಪ್ರತಿಭಾನ್ವಿತ 145 ವಿದ್ಯಾರ್ಥಿಗಳಿಗೆ ರೂ.10.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸೆ.30 ರಂದು ರೋಟರಿ ಸೇವಾ ಭವನ, ಅರಳಿ ರಸ್ತೆ, ಕಾಶಿಬೆಟ್ಟುವಿನಲ್ಲಿ ಜರುಗಿತು.


ಮುಖ್ಯ ಅತಿಥಿಗಳಾಗಿ ರೊ. ಕೃಷ್ಣ ಶೆಟ್ಟಿ ಕೆ., ಪಿಡಿಜಿ ಮತ್ತು ಜಿಲ್ಲಾ ಸಲಹೆಗಾರ, ARRFC, ವಿಧಾನ ಪರಿಷತ್ ಶಾಸಕ ರೊ. ಕೆ.ಪ್ರತಾಪಸಿಂಹ ನಾಯಕ್, ಪಡ್ವೆಟ್ನಾಯ ಫ್ಯಾಮಿಲಿ ಟ್ರಸ್ಟ್ ಉಜಿರೆ ಟ್ರಸ್ಟಿ, ಶ್ರೀಧರ ಪಡ್ವೆಟ್ನಾಯ, ರೊ. ರಂಜಿತ್ ಸಿಂಗ್ ಗುಲಾಟಿ, ಮಾಜಿ ಅಧ್ಯಕ್ಷರು, ರೋಟರಿ ಬೆಂಗಳೂರು ಇಂದಿರಾನಗರ, ಡಾ. ಎನ್. ಕೃಷ್ಣನ್ ಮೆನನ್, ಮಾಜಿ ಅಧ್ಯಕ್ಷ ರೋಟರಿ ಬೆಂಗಳೂರು ಇಂದಿರಾನಗರ, ರೊ. ಜಗದೀಶ್ ಎಂ., ನಿಕಟಪೂರ್ವ ಅಧ್ಯಕ್ಷ ರೋಟರಿ ಬೆಂಗಳೂರು, ಇಂದಿರಾನಗರ, ರೊ. ಯಶವಂತ್ ಪಟವರ್ಧನ್, ವಲಯ ಸೇನಾನಿ, ರೊ. ಡಾ. ಜಯ ಕುಮಾರ್ ಶೆಟ್ಟಿ, ಜಿಲ್ಲೆ. ಅಧ್ಯಕ್ಷರು, ಮೂಲ ಶಿಕ್ಷಣ ಮತ್ತು ಸಾಕ್ಷರತೆ, ರೊ. ಡಿ.ಎಂ.ಗೌಡ, ಕಾಯ೯ಕ್ರಮ ಸಂಯೋಜಕರು ರೋಟರಿ ಕ್ಲಬ್ ಬೆಳ್ತಂಗಡಿ, ರೊ. ಎನ್.ಬಾಲಕೃಷ್ಣನ್ ಅಧ್ಯಕ್ಷರು, ರೋಟರಿ ಬೆಂಗಳೂರು ಇಂದಿರಾನಗರ, ರೊ.ಎನ್. ಗೋಪಿನಾಥ್ ಕಾರ್ಯದರ್ಶಿ, ರೋಟರಿ ಬೆಂಗಳೂರು ಇಂದಿರಾನಗರ , ರೊ.ಮೇಜನರಲ್ (ನಿವೃತ್ತ) ಎಂ.ವಿ ಭಟ್, ಆನ್ಸ್ ಕ್ಲಬ್ ಅಧ್ಯಕ್ಷೆ ಅನಿತಾ ದಯಾಕರ್, ಬೆಳ್ತಂಗಡಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುಕುಮಾರ್ ಉಪಸ್ಥಿತರಿದ್ದರು.


ರೊ. ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೊ. ಧನಂಜಯ ರಾವ್ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ರೊ.ವಿದ್ಯಾ ಕುಮಾರ್ ಕಾಂಚೋಡು ಕಾರ್ಯದರ್ಶಿ, ರೋಟರಿ ಕ್ಲಬ್ ಬೆಳ್ತಂಗಡಿ ಧನ್ಯವಾದವಿತ್ತರು.

Related posts

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ ಹಾಗೂ ಕೆಸರೊಡೊಂಜಿ ದಿನದ ಸಂಭ್ರಮ

Suddi Udaya

ಶಿರ್ಲಾಲು ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಚಿಬಿದ್ರೆ ಮತ್ತು ನೆರಿಯ ಗ್ರಾಮಗಳಲ್ಲಿ ಹಾನಿಗೊಳಗಾದ ಸದಸ್ಯರ ತೋಟಗಳಿಗೆ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘದ ಪದಾಧಿಕಾರಿಗಳ ಭೇಟಿ

Suddi Udaya

ವಂದೇ ಮಾತರಂ’ ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಆರಂಭ : ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಸೇರಿದಂತೆ ಹಲವು ಸಂಘಟನೆಗಳ ಸಾಥ್

Suddi Udaya

ತಾಲೂಕಿನಾದ್ಯಂತ ಗಾಳಿ ಮಳೆ: ವಿವಿಧ ಕಡೆಗಳಲ್ಲಿ ಹಾನಿ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ: ಆಕರ್ಷಕ ಪಥಸಂಚಲನ

Suddi Udaya
error: Content is protected !!