26.5 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುದ್ದಿ ಉದಯ ವಾರಪತ್ರಿಕೆ’ ನೇತೃತ್ವ ‘ಮುಳಿಯ ಸಂಸ್ಥೆ’ಯ ಪ್ರಾಯೋಜಕತ್ವ – ‘ರಾಧೆ-ಕೃಷ್ಣ’ ಫೋಟೋ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ ಇದರ ವತಿಯಿಂದ ‘ಮುಳಿಯ ಜುವೆಲ್ಸ್’ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಹಮ್ಮಿಕೊಂಡ ‘ರಾಧೆ-ಕೃಷ್ಣ’ ಫೋಟೋ ಸ್ಪರ್ಧೆ’ಗೆ ತಾಲೂಕಿನಾದ್ಯಂತದಿಂದ ಬಹಳಷ್ಟು ಸ್ಪಂದನೆ ಹಾಗೂ ಜನರಿಂದ ಬೆಂಬಲ ದೊರಕಿದ್ದು, ಬಂದ ಪೋಟೋಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಮಕ್ಕಳ ಪೋಟೋಗಳನ್ನು ಸ್ಪರ್ಧೆಗೆ ಆಯ್ಕೆಮಾಡಲಾಗಿತ್ತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೆ.29 ರಂದು ಸುದ್ದಿ ಉದಯ ಪತ್ರಿಕಾ ಕಚೇರಿಯಲ್ಲಿ ಜರುಗಿತು.

ಪತ್ರಿಕೆ ಆರಂಭಗೊಂಡು 6 ತಿಂಗಳೊಳಗೆ ಮಾಡಿರುವ ಕಾರ್ಯ ಎಲ್ಲರೂ ಮೆಚ್ಚುವಂತದು:ರೋ| ಅನಂತ ಭಟ್ ಮಚ್ಚಿಮಲೆ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅವರು ಮಾತನಾಡಿ, ನಮ್ಮ ಸಂಸ್ಕೃತಿ-ಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯಂತಹ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ರಾಧೆಕೃಷ್ಣ ಪೋಟೋ ಸ್ಪರ್ಧೆ ಏರ್ಪಡಿಸಿರುವುದು ಅತ್ಯಂತ ಜೌಚಿತ್ಯಪೂರ್ಣವಾಗಿದೆ. ಪತ್ರಿಕೆ ಆರಂಭಗೊಂಡು ಆರು ತಿಂಗಳಲ್ಲಿ ಈ ಕಾರ್ಯಕ್ರಮ ಮಾಡಿರುವುದು ಎಲ್ಲರೂ ಮೆಚ್ಚುವಂತ ಕಾರ್ಯವಾಗಿದೆ. ಒಳ್ಳೆಯವರಿಗೆ ಕಷ್ಟಬಂದಾಗ ಒಳ್ಳೆಯವರ ಜೊತೆ ನಿಲ್ಲಿ, ಕೆಟ್ಟವರ ಜೊತೆ ನಿಲ್ಲಬೇಡಿ, ಸಮಾಜದ ಸ್ವಾಸ್ಥ್ಯ ಕದಡುವಂತಹ ವಿಷಯದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಇದರ ಬಗ್ಗೆ ಚಿಂತಿಸಿ ಒಳ್ಳೆಯವರ ಜೊತೆ ಜನರು ನಿಲ್ಲಬೇಕು ಎಂದು ಸಲಹೆ ನೀಡಿದರು.

ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಕಾರ್ಯ ಶ್ಲಾಘನೀಯ: ಲ| ಉಮೇಶ್ ಶೆಟ್ಟಿ

ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅವರು ಮಾತನಾಡಿ, ಆರು ತಿಂಗಳಲ್ಲಿ ಸುದ್ದಿ ಉದಯ ಜನಮೆಚ್ಚುಗೆಯ ಕೆಲಸ ಮಾಡಿದೆ. ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಕಾರ್ಯ ಮಾಡಿದೆ. ಮಕ್ಕಳು ಏನೂ ಮಾಡಿದರೂ ಚಂದ, ಇಂತಹ ಕಾರ್ಯಕ್ರಮ ಮಾಡುತ್ತಾ ಇರಬೇಕು, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕಾರ್ಯಕ್ರಮ ಸಂಘ-ಸಂಸ್ಥೆ ಮೂಲಕ ಮಾಡಬೇಕು, ಸುದ್ದಿ ಉದಯ ಪತ್ರಿಕೆ ಇದನ್ನು ಮಾಡಿದೆ ತೋರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿ ಉದಯ ಪತ್ರಿಕೆ ಪತ್ರಿಕಾಕ್ಷೇತ್ರದಲ್ಲಿ ಹೊಸತನವನ್ನು ತಂದಿದೆ: ಜೇಸಿ| ಶಂಕರ ರಾವ್

ಮಂಜುಶ್ರೀ ಜೇಸಿ ಸಂಸ್ಥೆಯ ಅಧ್ಯಕ್ಷ ಶಂಕರ ರಾವ್ ಅವರು ಮಾತನಾಡಿ, ಸುದ್ದಿ ಉದಯ ಪತ್ರಿಕೆ ಪತ್ರಿಕಾಕ್ಷೇತ್ರದಲ್ಲಿ ಹೊಸತನವನ್ನು ತರಲು ಕಾರಣವಾಗಿದೆ. ನಾವು ಯಾವಾಗಲು ಒಬ್ಬರ ಕೈಕೆಳಗೆ ದುಡಿಯಬಾರದು. ನಾವು ಒಂದು ಸ್ವಂತ ಉದ್ಯಮವನ್ನು ಸ್ಥಾಪಿಸಿದಾಗ ಹಲವು ಮಂದಿಗೆ ಉದ್ಯೋಗಕ್ಕೆ ಅವಕಾಶವಾತ್ತದೆ ಇದನ್ನು ಸುದ್ದಿ ಉದಯ ವಾರಪತ್ತಿಕೆ ಮಾಡಿದೆ. ರಾಧೆಕೃಷ್ಣ ಸ್ಪರ್ಧೆಯನ್ನು ಪತ್ರಿಕೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಂಸ್ಕಾರಯುತ ಯೋಚನೆಗೆ ಇದು ಅವಕಾಶವಾಗಿದೆ. ಇಂದಿನ ಮೊಬೈಲ್ ಯುಗದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಾಗಿದೆ ಎಂದು ತಿಳಿಸಿದರು.

ಸಮಾಜಮುಖಿ ಕಾರ್ಯಕ್ರಮಗಳಿಗೆ ಸಂಸ್ಥೆಯ ಬೆಂಬಲ: ಅಶೋಕ್ ಬಂಗೇರ ಶಾಖಾಧಿಕಾರಿ

ಮುಳಿಯ ಬಹುಮಾನ ಪ್ರಾಯೋಜಕ ಮುಳಿಯ ಸಂಸ್ಥೆಯ ಬೆಳ್ತಂಗಡಿ ಶಾಖಾಧಿಕಾರಿ ಅಶೋಕ್ ಬಂಗೇರ ಅವರು ಮಾತನಾಡಿ, ಮುಳಿಯ ಸಂಸ್ಥೆ ವತಿಯಿಂದಲೂ ಶ್ರೀ ಕೃಷ್ಣಾಜನ್ಮಾಷ್ಟಮಿಯ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವು. ಇತರ ಹಬ್ಬಗಳ ಸಮಯದಲ್ಲಿ ಬೇರೆ, ಬೇರೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಸುದ್ದಿ ಉದಯ ಪತ್ರಿಕೆಯ ಈ ಕಾರ್ಯಕ್ರಮಕ್ಕೂ ನಮ್ಮ ಸಂಸ್ಥೆಯ ವತಿಯಿಂದ ಪ್ರಯೋಜಕತ್ವವನ್ನು ಮಾಡಿದ್ದೇವೆ. ಮುಂದೆಯೂ ಸಂಸ್ಥೆ ಸಾಮಾಜಮುಖಿ ಕಾರ್ಯಗಳಿಗೆ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮುಳಿಯ ಸಂಸ್ಥೆಯ ಉಪಶಾಖಾಧಿಕಾರಿ ಲೋಹಿತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷ್ಣ ಸ್ಪರ್ಧಾ ವಿಜೇತರಾದ ಪುಣಾಣಿಗಳಾದ (ಪ್ರ) ಶಿವಿನ್ ವಿಜೇತ್ ಸಾಲ್ಯಾನ್ ಓಡಿಲ್ನಾಳ, (ದ್ವಿ) ತಕ್ಷ್ವಿ ಎ.ಆರ್ ಅಂಡೆತ್ತಡ್ಕ, (ತೃ) ಕೃದಯ್ ನವೀನ್ ಶೆಟ್ಟಿಗಾರ್, ರಾಧೆ ಸ್ಪರ್ಧಾ ವಿಜೇತ (ಪ್ರ) ಅಂಕಿತಾ ನಾಯಕ್ (ದ್ವಿ) ತ್ವಿಷಾ ಹಾಗೂ ಸಮಾಧಾನಕರ ಬಹುಮಾನ ಪಡೆದ ಶ್ರೀಯಾನ್ ಎಸ್.ಪೂಜಾರಿ ಹೊಸಪಟ್ಣ ಬಜಿರೆ, ಯಶ್ವಿ ಜಿ. ಶೆಟ್ಟಿ ಸವಣಾಲು, ಕ್ಷಮ್ಯ ಎಸ್. ಅಂಡಿಂಜೆ, ಶ್ಲೋಕ್ ಯಶ್ ಪೂಜಾರಿ ಹಾರೊದ್ದ, ಮರೋಡಿ, ಸಮೃದ್ಧಿ ಜಿ. ಶೆಟ್ಟಿ ಕುತ್ಯಾರ್ ಬೆಳ್ತಂಗಡಿ ಇವರಿಗೆ ಅತಿಥಿ-ಗಣ್ಯರು ಬಹುಮಾನವನ್ನು ವಿತರಿಸಿದರು.

ಪೋಟೋ ಸ್ಪರ್ಧಾ ತೀರ್ಪುಗಾರರಾದ ಗುರುವಾಯನಕೆರೆ ದಾಮು ಸ್ಟುಡಿಯೋ ಮಾಲಕ ದಾಮೋದರ ಕುಲಾಲ್ ಮತ್ತು ನೇಸರ ಸ್ಟುಡಿಯೋ ಬಳಂಜ ಮಾಲಕ ಬಾಲಕೃಷ್ಣ ಶೆಟ್ಟಿ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ಪರ್ಧಾ ವಿಜೇತ ಮಕ್ಕಳ ಪರವಾಗಿ ತಾಲೂಕು ಮಹಿಳಾ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ವಿನೋದಿನಿ ರಾಮಪ್ಪ ಅನಿಸಿಕೆ ವ್ಯಕ್ತಪಡಿಸಿ ಸುದ್ದಿ ಉದಯ ಪತ್ರಿಕೆಯ ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಅನಿತಾ ಹೆಗ್ಡೆ, ಇಕೋ ಫ್ರೆಸ್ ಎಂಟರ್‌ಪ್ರೈಸಸ್ ಮಾಲಕಿ ಧನುಷಾ ರಾಕೇಶ್ ಹೆಗ್ಡೆ, ಮಕ್ಕಳ ಪೋಷಕರು, ಪುಟಾಣಿಗಳು ಭಾಗವಹಿಸಿದ್ದರು. ಸುದ್ದಿ ಉದಯ ವಾರಪತ್ರಿಕೆಯ ಸಂಪಾದಕ ಬಿ.ಎಸ್.ಕುಲಾಲ್ ಸ್ವಾಗತಿಸಿದರು. ಉಪಸಂಪಾದಕ ಸಂತೋಷ್ ಪಿ. ಕೋಟ್ಯಾನ್ ಬಳಂಜ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ. ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಪತ್ರಿಕೆಯ ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ, ಅಕೌಂಟ್ ವಿಭಾಗದ ಮುಖ್ಯಸ್ಥೆ ಸುಧಾರಾಣಿ, ಆನ್‌ಲೈನ್ ವಿಭಾಗದ ಮುಖ್ಯಸ್ಥೆ ಪ್ರತಿಭಾ, ಕಂಪ್ಯೂಟರ್ ವಿಭಾಗದ ಧನ್ಯ , ಚಾನೆಲ್ ವಿಭಾಗದ ಆನಂತ ಭಟ್, ಸೌಮ್ಯ, ಕಚೇರಿ ಸಿಬ್ಬಂದಿ ಸುದೀತ್ ಉಪಸ್ಥಿತರಿದ್ದರು.

Related posts

ಉಜಿರೆ: ನೆನಪಿನ ಅಂಗಳ ಕಾರ್ಯಕ್ರಮದಲ್ಲಿ ಮನೋರಮ ಭಟ್ ರವರಿಗೆ ಸನ್ಮಾನ

Suddi Udaya

ಶಿಬಾಜೆ: ಫತ್ತಿಮಾರುನಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಕೃಷಿ ಹಾನಿ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya

ಕಕ್ಯಪದವು : ಎಲ್ ಸಿ ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಉಚಿತ ಐಬಿಪಿಎಸ್ ಪರೀಕ್ಷಾ ತರಬೇತಿಗೆ ಅಧೀಕೃತ ಚಾಲನೆ:

Suddi Udaya
error: Content is protected !!