ಕ್ಲಸ್ಟರ್ ಮಟ್ಟದ ವಾರ್ಷಿಕ ಕ್ರೀಡಾಕೂಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಹೊಸಂಗಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ನಡೆದ ಪಡ್ಡoದಡ್ಕ, ಬಜಿರೆ ಮತ್ತು ನಿಟ್ಟಡೆ ಕ್ಲಸ್ಟರ್ ಗಳ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿ, ಬೆಳ್ತಂಗಡಿ ತಾಲೂಕು ಇದರ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರ 100 ಮೀಟರ್, 200 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ 7 ನೇ ತರಗತಿಯ ಮೋಕ್ಷಿತ್ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ಚಾoಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. 7ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಖ್ಯಾತ್ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ, ಚನನಗೌಡ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ, ಅಮಿತ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಹಾಗೂ ರಿಲೇ ಸ್ಪರ್ಧೆಯಲ್ಲಿ ಮೋಕ್ಷಿತ್, ಪ್ರಖ್ಯಾತ್, ಚನನಗೌಡ, ಮುತ್ತಣ್ಣ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಪ್ರೌಢಶಾಲಾ ವಿಭಾಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಮೋನಿಷಾ 100 ಮೀಟರ್, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 8ನೇ ತರಗತಿಯ ದೀಕ್ಷಿತಾ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ, 8ನೇ ತರಗತಿಯ ವೈಷ್ಣವಿ ಗುಂಡೆಸತದಲ್ಲಿ ತೃತೀಯ ಸ್ಥಾನ ಮತ್ತು ರಿಲೇ ಸ್ಪರ್ಧೆಯಲ್ಲಿ 8ನೇ ತರಗತಿಯ ಮೋನಿಶಾ, ಚಂದನ, ನೇಹ, ದೀಕ್ಷಿತಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಶಾಲಾ ಪ್ರಾoಶುಪಾಲರಾದ ಶ್ರೀಧರ್ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.

Leave a Comment

error: Content is protected !!