April 2, 2025
ತಾಲೂಕು ಸುದ್ದಿ

ಪುತ್ತೂರು ಮಾತೆರ್ಲ ಒಂಜೇ ವಾಟ್ಸ್ ಆಫ್ ಗ್ರೂಪ್: ಸಾರ್ವಜನಿಕ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ

ಬೆಳ್ತಂಗಡಿ: ಮಾತೆರ್ಲ ಒಂಜೇ ವಾಟ್ಸ್ ಆಫ್ ಗ್ರೂಪ್ ಪುತ್ತೂರು ಇದರ ಆಶ್ರಯದಲ್ಲಿ ಈ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆದ ಬಣ್ಣದ ಗಜಮುಖ-23 ಸಾರ್ವಜನಿಕ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆಯು ನೆಹರು ನಗರದ ಕಛೇರಿಯಲ್ಲಿ ನಡೆಯಿತು.
ಒಟ್ಟು43 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಜೇತರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅದೇ ರೀತಿ ಭಾಗವಹಿಸಿದ ಪ್ರತಿ ಸದಸ್ಯರಿಗೆ ಅಭಿನಂದನ ಪತ್ರ ನೀಡುವ ಮೂಲಕ ಎಲ್ಲಾ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲಾಯಿತು.

ವಿಶೇಷವಾಗಿ 12 ಜನರಿಂದ ಆರಂಭಗೊಂಡ ಈ ಗ್ರೂಪ್,ಇದರ ಮೂಲಕ ಹಲವಾರು ‌ಸಮಾಜಮುಖಿ ಸಹಾಯ ‌ಹಸ್ತ ನೀಡುವ ಕೆಲಸ ನಡೆಯುತ್ತ ಬಂದಿದ್ದು ಯಾವುದೇ ರಾಜಕೀಯ ನಡೆಯಿಲ್ಲದೇ ನಾವೆಲ್ಲರೂ ಒಂದೇ ಎಂಬ ಧ್ಯೇಯದ‌ ಮೂಲಕ ಈ ತಂಡ‌ ಮುನ್ನಡೆಯುತ್ತಿದೆ.
ಈ ಸಂದರ್ಭದಲ್ಲಿ ಗ್ರೂಪ್ ನ ಸದಸ್ಯರಾದ ಮನ್ಮಥ ಶೆಟ್ಟಿ ಪುತ್ತೂರು, ಯೋಗೀಶ್ ಅಳಕೆ,ಪ್ರವೀಣ್ ಕೊಯಿಲ,ಪ್ರಸಾದ್ ಕೊಯಿಲ,ರಾಜೇಶ್ ಕುಲಾಲ್,ಪ್ರಕಾಶ್ ಮಿತ್ತೂರು,ದಾಮೋದರ ಪರಮಾರ್ , ಸುಪ್ರೀತ್ ಕೊಯಿಲ, ಶ್ರೀನಿಧಿ ಸುಳ್ಯ ಉಪಸ್ಥಿತರಿದ್ದರು

Related posts

ಬೆಳ್ತಂಗಡಿ: ಪೋಲಿಯೋ ಲಸಿಕಾ ಅಭಿಯಾನ: ಶೇ 95% ಗುರಿ ಸಾಧನೆ

Suddi Udaya

ಬೆಳ್ತಂಗಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಪಿಸಿ ಸೆಬಾಸ್ಟಿಯಾನ್ ಆಯ್ಕೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಪಿಲಿಗೂಡು ಶಾಲಾ ವಾರ್ಷಿಕೋತ್ಸವ, ವಿವೇಕ ಕೊಠಡಿ ಮತ್ತು ರಂಗಮಂದಿರ ಉದ್ಘಾಟನೆ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ

Suddi Udaya

ಹೊಸಂಗಡಿಯ ಪುಲಾಬೆಯಲ್ಲಿ ಬದ್ರಿಯಾ ಮಸ್ಜಿದ್ ಮತ್ತು ಮದರಸ ಉದ್ಘಾಟನೆ

Suddi Udaya
error: Content is protected !!