23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

ಕೊಕ್ಕಡ:ಕೊಕ್ಕಡ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅ.1 ರಂದು ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಂತೆ ಶ್ರಮದಾನ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸ್ವಚ್ಛತಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಶ್ರೀಮತಿ ವಿಮಲಾ, ಗೀತಾ, ಗಾಯತ್ರಿ ಹಾಗೂ ವಾಹನ ಚಾಲಕರಾದ ಕೇಶವ ಅವರನ್ನು ಜೇಸಿಐ ಕೊಕ್ಕಡ ಕಪಿಲಾ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಮದ ಜನರಿಗೆ ನೀಡುತ್ತಿರುವ ಸೇವೆಯನ್ನು ಗುರುತಿಸಿ ಜೇಸಿ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಅವರು ಶಾಲು, ಸ್ಮರಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಸ್ವಚ್ಛತಾ ಪ್ರಮಾಣ ಬೋಧಿಸಿದರು. ಹೊಸದಾಗಿ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷರು ಬೇಬಿ, ಉಪಾಧ್ಯಕ್ಷರಾದ ಪ್ರಭಾಕರ ಗೌಡ ಅವರನ್ನು ಜೇಸಿ ವತಿಯಿಂದ ಅಭಿನಂದಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ್ ಆಲಂಬಿಲ, ಪವಿತ್ರ, ವಿಶ್ವನಾಥ ಕಕ್ಕುದೋಳೀ, ವನಜಾಕ್ಷಿ , ಜಗದೀಶ್, ಪ್ರಮೀಳಾ, ಪುರುಷೋತ್ತಮ, ಶರತ್, ವನಿತಾ, ಜಾನಕಿ, ಲತಾ, ಕಾರ್ಯದರ್ಶಿ , ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಶ್ರಮದಾನದಲ್ಲಿ ಜೇಸಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ್ ರಾವ್, ಕಾರ್ಯದರ್ಶಿ ವಿಕ್ಟರ್ ಸುವಾರಿಸ್, ಲೇಡಿ ಜೇಸಿ ವಿಭಾಗದ ಅಧ್ಯಕ್ಷರು ದೀಪಾ, ನರಸಿಂಹ ನಾಯಕ್, ಜೋಸೆಫ್ ಪಿರೇರಾ, ಜಸ್ವಂತ್ ಪಿರೇರಾ ಸಹಕರಿಸಿದರು.

Related posts

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದಿಂದ ಚಿಕಿತ್ಸಾ ನೆರವು

Suddi Udaya

ಸಿಎ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕೇಶವ ಕಾಮತ್ ತೇರ್ಗಡೆ

Suddi Udaya

ಪಟ್ರಮೆ: ಎಸ್.ವಿ.ಟಿ ಸ್ಪೋರ್ಟ್ಸ್ ಕ್ಲಬ್ ದೀಪಾವಳಿ ಪ್ರಯುಕ್ತ 3ನೇ ವರ್ಷದ ವಾಲಿಬಾಲ್ ಪಂದ್ಯಾಟ

Suddi Udaya

ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ: ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಲಿಂಗ ಸಮಾನತಾ ಪ್ರೇರಣಾ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರಕಾಣಿಕೆಗೆ ಚಾಲನೆ

Suddi Udaya
error: Content is protected !!