25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು: ಮೈತ್ರಿ ಯುವಕ ಮಂಡಲ ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪತ್ರ ಮಂಡನೆ

ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪತ್ರ ಮಂಡನೆ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ಅ.1 ರಂದು ನಡೆಯಿತು.

ಸಂಘದ ಅಧ್ಯಕ್ಷರಾದ ರಾಜೇಶ್ ಗೌಡ ಪಾರ್ಲರವರು ಸಭಾಧ್ಯಕ್ಷತೆಯನ್ನು ವಹಿಸಿದರು, ಸಂಘದ ಕಾರ್ಯದರ್ಶಿ ಮಹಮ್ಮದ್ ಆದರ್ಶನಗರ ವರದಿ ವಾಚಿಸಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕಿರಣ್ ಈರೆಂತ್ಯಾರ್ ರವರು ಲೆಕ್ಕಪತ್ರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಕೇಶವ ಪಿ ಬೆಳಾಲು ವಕೀಲರು ಹಾಗೂ ರಮೇಶ್ ಟೈಲರ್ ರವರು ಸಂಘವು ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕಿ, ಸಂಘವು ಸಮಾಜದಲ್ಲಿ ಇನ್ನಸ್ಟು ಸಮಾಜಮುಖಿ ಉತ್ತಮ ಕಾರ್ಯದಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.


ಮುಂದಿನ ಎರಡು ವರ್ಷದ ಅವಧಿಗೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನಿತಿನ್ ಮೋನಿಸ್,ಕಾರ್ಯದರ್ಶಿಯಾಗಿ ವಿಘ್ನೇಶ್ ಮುಂಡೆತ್ಯಾರ್, ಉಪಾಧ್ಯಕ್ಷರಾಗಿ ಆಸೀಫ್ ಮುಂಡೆತ್ಯಾರ್,ಜತೆ ಕಾರ್ಯದರ್ಶಿಯಾಗಿ ನವನೀತ್ ಗೌಡ ಮತ್ತು ಕೋಶಾಧಿಕಾರಿ ಯಾಗಿ ಕಿರಣ್ ಈರೆಂತ್ಯಾರ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರಾಧೇಶ್ ಆದರ್ಶನಗರ,ಕೇಶವ ಆದರ್ಶ ನಗರ, ಸುರೇಶ್ ಇಂದಲ್ಕೆ, ಶಾಹಿದ್ ಆದರ್ಶ ನಗರ,ಮಹಮ್ಮದ್ ಆದರ್ಶ ನಗರ,ಯತಿರಾಜ್ ಮೊಕ್ಕರ್ಜಾಲ್ ಇವರು ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ರಾಜೇಶ್ ಪಾರಳ ಇವರನ್ನು ನೇಮಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಘದ ಗೌರವ ಸಲಹೆಗಾರರಾದ ನವೀನ್ ಮೋನಿಸ್, ಕೇಶವ ಟೈಲರ್, ಚಂದ್ರಹಾಸ ಪಾರಳ, ಹರೀಶ್ ದರ್ಖಾಸು, ದಿನೇಶ್ ದರ್ಖಾಸು, ಶ್ಯಾಮರಾಯ ಆಚಾರ್ಯರವರು ಉಪಸ್ಥಿತರಿದ್ದರು, ಸಂಘದ ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗೌರವಾಧ್ಯಕ್ಷರಾದ ಪ್ರವೀಣ್ ವಿಜಯ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಸಂಘದ ಗೌರವ ಸಲಹೆಗಾರರಾದ ಶ್ರೀನಿವಾಸ್ ಗೌಡ ನೋಟರಿ ವಕೀಲರು ಕಾರ್ಯಕ್ರಮ ನಿರೂಪಿಸಿ, ಗೌರವ ಸಲಹೆಗಾರರಾದ ಅನಿಲ್ ಪ್ರಕಾಶ್ ರವರು ವಂದಿಸಿದರು.

Related posts

ತಣ್ಣೀರುಪಂತ: ಮುಂದಿಲ ನಿವಾಸಿ ಸೋಮವಾತಿ ನಿಧನ

Suddi Udaya

ಉಜಿರೆ: ಮುಂಡತ್ತೋಡಿ ನಿವಾಸಿ ಪದ್ಮಣ್ಣ ಗೌಡ ನಿಧನ

Suddi Udaya

ಕನ್ಯಾಡಿ ಶ್ರೀಗಳ ಚಾತುರ್ಮಾಸಕ್ಕೆ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗಣ್ಯರ ಭೇಟಿ

Suddi Udaya

ಕಣಿಯೂರು: ಪಿಲಿಗೂಡು ಹಾ.ಉ.ಸ. ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.61.79 ಲಕ್ಷ ಲಾಭ, ಶೇ. 25 ಡಿವಿಡೆಂಟ್

Suddi Udaya

ಧರ್ಮಸ್ಥಳ ಗ್ರಾ.ಪಂ. ನಿಂದ ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಜಾಹೀರಾತು ಫಲಕ ತೆರವು

Suddi Udaya

ವೇಣೂರು: ಪಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಪಿಕಪ್‌ ವಾಹನ ವಶ

Suddi Udaya
error: Content is protected !!