April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.4: ಕೊಕ್ಕಡ ಜೇಸಿಐಗೆ ಜೇಸಿ ವಲಯಾಧ್ಯಕ್ಷರ ಭೇಟಿ

ಕೊಕ್ಕಡ: ಜೇಸಿ ವಲಯ 15 ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಜೇಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಅ.4ರಂದು ಅಧಿಕೃತ ಭೇಟಿ ನೀಡಲಿದ್ದಾರೆ.
ಸಂಜೆ 6.30ಕ್ಕೆ ಸಂತ ಜಾನರ ಶಾಲಾ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಕೊಕ್ಕಡ ಘಟಕದ ನೂತನ ವೆಬ್‌ಸೈಟ್ ಹಾಗೂ ಆಪ್ ಲೋಕಾರ್ಪಣೆ ಮಾಡಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಕೌಕ್ರಾಡಿ ಚರ್ಚ್ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿಶಾಲಾಕ್ಷಿ ಬಿ, 108 ಆಂಬುಲೆನ್ಸ್ ಸಿಬ್ಬಂದಿ ವಿಲ್ಮಾ ಶ್ವೇತಾ ಸ್ಟೆಲ್ಲಾ, ಹಿರಿಯ ಸದಸ್ಯರಾದ ಯು.ನರಸಿಂಹ ನಾಯಕ್, ನಾಟಿ ವೈದ್ಯರಾದ ಕೆ. ವಸಂತ ಪೂಜಾರಿ ಅವರಿಗೆ ಸನ್ಮಾನ ನಡೆಯಲಿದೆ. ಸ್ಥಳೀಯ ಸಂತ ಜಾನರ ಹಿ.ಪ್ರಾ. ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಆದ್ಯ, ಯೋಶಿತಾ, ವಿವಿಯನ್ ಸುವಾರಿಸ್, ಅಂಜನಾ, ರಿಷಿಕ್, ಮನಸ್ವಿ, ಕಿಶನ್, ಶ್ರವಣ್, ವೈಷ್ಣವ್, ಧನ್ಯಶ್ರೀ, ಆಕಾಶ್, ವೀಕ್ಷಾ, ಉಜ್ವಲ್, ರಾಯನ್, ಸಾಧನಾ, ನೇತೃಶ್ರೀ, ಚೈತ್ರೇಶ್, ಜಯ, ಪ್ರೆಸಿಲ್ಲಾ ಮಾನ್ಯಶ್ರೀ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.

ಈ ಸಮಾರಂಭದಲ್ಲಿ ಜೇಸಿ ವಲಯ 15 ರ ಉಪಾಧ್ಯಕ್ಷರಾದ ಭರತ್ ಶೆಟ್ಟಿ, ವಲಯಾಧಿಕಾರಿ ಕಾರ್ತಿಕ್ ಬಿ. ಭಾಗವಹಿಸುವವರು. ಸಭೆಗೆ ಎಲ್ಲರಿಗೂ ಮುಕ್ತ ಸ್ವಾಗತವಿದೆ ಎಂದು ಕೊಕ್ಕಡ ಜೇಸಿಐ ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ತಿಳಿಸಿದ್ದಾರೆ.

Related posts

ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಸಮಗ್ರ ಪ್ರಶಸ್ತಿ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡದಿಂದ ಷಷ್ಠಿ ಪೂರ್ತಿಯ ಸಮಾಲೋಚನಾ ಸಭೆ

Suddi Udaya

ನೀರಚಿಲುಮೆಯಲ್ಲಿ ಚರಂಡಿಗೆ ಉರುಳಿದ ಕಾರು: ನ್ಯಾಯವಾದಿ ಬಿ.ಎಂ ಭಟ್ ಅಪಾಯದಿಂದ ಪಾರು

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾ‌ರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya
error: Content is protected !!