27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

ಉಜಿರೆ : ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆಯನ್ನು ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿಕುಮಾರ್ ಇವರ ಅಧ್ಯಕ್ಷತೆಯಲ್ಲಿ ಉಜಿರೆ ಗ್ರಾಮ ಪಂಚಾಯತಿನ ಸುವರ್ಣ ಸೌಧ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ, ಸ್ವತಂತ್ರ ಭಾರತದ 2ನೇ ಪ್ರಧಾನ ಮಂತ್ರಿಗಳಾದ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 119ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಸ್ವಚ್ಛತೆಯೇ ಸೇವೆ ಆಂದೋಲನದ ಪ್ರಯುಕ್ತ ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದವರು ಮಾಡಿರುವ ಬಟ್ಟೆ ಚೀಲಗಳನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಗ್ರಾಮ ಪಂಚಾಯತ್ ಸದಸ್ಯರು,ಅಧ್ಯಕ್ಷರು ವರ್ತಕರ ಸಂಘ ಉಜಿರೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ವೇಣೂರು: ಫೆ.22 ರಿಂದ ಮಾರ್ಚ್ 1ರ ವರೆಗೆ ವೇಣೂರು ಬಾಹುಬಲಿಗೆ ಮಹಾಮಸ್ತಕಾಭಿಷೇಕ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮಹಾಮಸ್ತಕಾಭಿಷೇಕದ ದಿನ ಘೋಷಣೆ

Suddi Udaya

ಉಜಿರೆ ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಸಂದರ್ಶನವನ್ನು ಎದುರಿಸುವುದು ಹೇಗೆ? ಎಂಬ ವಿಷಯದ ಕುರಿತು ಉಪನ್ಯಾಸ

Suddi Udaya

ರಾಷ್ಟ್ರಮಟ್ಟದ ಪುರುಷರ ಯೋಗಾಸನ ಸ್ಪರ್ಧೆಗೆ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿಗಳ ಆಯ್ಕೆ

Suddi Udaya

ನಾವರ ಪೆರಡಾಲು ಗುತ್ತಿನ ಗುಣಪಾಲ ಅಜ್ರಿ ನಿಧನ

Suddi Udaya

ಕೊಕ್ಕಡ: ಸೌತಡ್ಕದಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ: ನಡೆದು ಕೊಂಡು ಹೋಗುವ ಸಂದರ್ಭದಲ್ಲಿ ಆನೆ ತಿವಿದು; ಬಾಲಕೃಷ್ಣ ಶೆಟ್ಟಿ ಸ್ಥಳದಲ್ಲೇ ಸಾವು

Suddi Udaya

ದ.ಕ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ಪದಾಧಿಕಾರಿಗಳ ಸಭೆ

Suddi Udaya
error: Content is protected !!