ನಾವೂರು ಗ್ರಾಮ ಪಂಚಾಯತಿನಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮ ಸಭೆಯು ಅ.2 ರಂದು ನಡೆಸಲಾಯಿತು.
2024-2025 ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಬಗ್ಗೆ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಆಯುಷ್ಮಾನ್ ಕಾರ್ಡ್ ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ಕಾರ್ಡ್ ಗಳನ್ನು ನೀಡುವ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು. ಒಡಿಎಫ್ ಪ್ಲಸ್ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಾವೂರು ಗ್ರಾಮವನ್ನು ಒಡಿಎಫ್ ಪ್ಲಸ್ ಮೊಡೆಲ್ ಗ್ರಾಮ ಎಂದು ಘೋಷಿಸಲಾಯಿತು. ಅಧ್ಯಕ್ಷರ ಪರವಾಗಿ ಸದಸ್ಯ ಗಣೇಶ ಗೌಡರವರು ಘೋಷಣೆ ಓದಿದರು .
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದ ವಹಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಮಮತ, ಸದಸ್ಯರಾದ ಗಣೇಶ್ ಗೌಡ , ಹರೀಶ್ ಸಾಲಿಯಾನ್, ಬಾಲಕೃಷ್ಣ ಎಂ ಕೆ, ಶ್ರೀಮತಿ ವೇದಾವತಿ, ಎನ್ ಕೆ ಹಸೈನಾರ್ ಮತ್ತು ತೃಪ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ,ಎಂ.ಬಿ.ಕೆ ,ಸದಸ್ಯರು ,ಅಂಗನವಾಡಿ ಕಾರ್ಯಕರ್ತರು ,ಆಶಾ ಕಾರ್ಯಕರ್ತರು ,ಗ್ರಾಮಸ್ಥರು ,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟ ಕೃಷ್ಣರಾಜ ಸ್ವಾಗತಿಸಿ ಮಾಹಿತಿ ನೀಡಿ ಧನ್ಯವಾದವಿತ್ತರು. ನಂತರ ದ.ಕ .ಜಿ.ಪಂ ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೋಹಿಣಿ ಹಾಗೂ ಸಹ ಅಧ್ಯಾಪಕರು, ಶಾಲಾ ಮಕ್ಕಳು , ಗ್ರಾಮಸ್ಥರು ಸೇರಿ ನಾವೂರು ಪೇಟೆ ಹಾಗೂ ಶಾಲಾ ವಠಾರದಲ್ಲಿ ಸ್ವಚ್ಛತೆ ಮಾಡಿದರು.