September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕಳೆಂಜ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಶಿಬರಾಜೆ, ಪಾದೆ ಅಂಗನವಾಡಿ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಶಿಬರಾಜೆ, ಪಾದೆ ಹಾಗೂ ಜೆಸಿಐ ಕೊಕ್ಕಡ, ಕಪಿಲಾ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಅ.1 ರಂದು ನಡೆಯಿತು.


ಕಳೆಂಜ ಗ್ರಾ.ಪಂ. ಸದಸ್ಯ ನಿತ್ಯಾನಂದ ರೈ ಸ್ವಚ್ಛತಾ ಹಿ ಸೇವಾ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. ನಂತರ ಶಿಬರಾಜೆ, ಪಾದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಡಲಾಯಿತು.


ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರತಿಮಾ ನಾರಾಯಣ, ಸದಸ್ಯರುಗಳಾದ ಜಯವರ್ಮ ಜೈನ್, ಸೆವ್ರಿನ್ ಲಕ್ಷ್ಮೀ ನಾರಾಯಣ, ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಟಿ. ಸೆಬಾಸ್ಟಿನ್, ಜೆಸಿಐ ಸದಸ್ಯರಾದ ಸಂತೋಷ್ ಜೈನ್, ಅಕ್ಷತ್ ರೈ, ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ, ಕಳೆಂಜ ಗ್ರಾ.ಪಂ. ಸದಸ್ಯೆ ಪ್ರೇಮಾ ಬಿ.ಎಸ್. ಕಳೆಂಜ ಸಿ.ಎ. ಬ್ಯಾಂಕ್ ನಿರ್ದೇಶಕ ರಾಜೇಶ್, ಸಂಜೀವಿನಿ ಕೃಷಿ ಸಖಿ ಸುಮಿತ್ರಾ, ಹೊನ್ನಪ್ಪ ಗೌಡ, ರಾಘವ ಗೌಡ ಬಲ್ಕಾಜೆ, ಧನುಷ್, ಧನ್ಯಾ, ಬಾಬು ರೈ, ನಾರಾಯಣ ಮಾರ್ತಾಡಿ, ಅಶ್ವಥ್, ಅಮೃತ್, ಮಕ್ಕಳು ಉಪಸ್ಥಿತರಿದ್ದರು.


ಅಕ್ಷತ್ ರೈ ಸಿಹಿತಿಂಡಿ ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಅನ್ಸಿಲ್ಲಾ ವಂದಿಸಿದರು.

Related posts

ಪಟ್ರಮೆಯ ಹಿಂದೂ ಯುವಕನ ಜೊತೆ ನೆಲ್ಲಿಕಾರಿನ ಮುಸ್ಲಿಂ ಯುವತಿ ವಿವಾಹ

Suddi Udaya

ಕರಾಟೆ ಕ್ರೀಡಾಕೂಟ: ಬೆಳ್ತಂಗಡಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮುಂಡೂರು  ನಾಗ ಕಲ್ಲುರ್ಟಿ ದೈವಸ್ಥಾನ ಮಂಗಳಗಿರಿಯಲ್ಲಿ ನಾಗರ ಪಂಚಮಿ ಆಚರಣೆ

Suddi Udaya

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅತ್ಯಾಚಾರ ಪ್ರಕರಣ; ಸಿಐಡಿಗೆ ಫೈಲ್ ವರ್ಗಾವಣೆ

Suddi Udaya

ಆಳ್ವಾಸ್ ಕಾಲೇಜು: ಡಾ. ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ – ಪ್ರೀತಿಯ ಸಖ್ಯ” ವಿಶೇಷ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದಿಂದ ಆರೋಗ್ಯ ಇಲಾಖೆ ಭೇಟಿ ಹಾಗೂ ಪರಿಸರ ದಿನಾಚರಣೆ

Suddi Udaya
error: Content is protected !!