22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಿಯೋನ್ ಆಶ್ರಮ : ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

ಗಂಡಿಬಾಗಿಲು: ಸಿಯೋನ್, ಆಶ್ರಮ, ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ ಅ.02 ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜಂಟಿಯಾಗಿ ಸಂಭ್ರಮದಿಂದ ಆಚರಿಸಲಾಯಿತು.

ಸಭೆಯ ಅಧ್ಯಕ್ಷ ಸ್ಥಾನವನ್ನಲಂಕರಿಸಿದ್ದ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ.ಯು.ಸಿ. ಪೌಲೋಸ್‌ ರವರು ಗಾಂಧೀಜಿಯವರ ತ್ಯಾಗ-ಬಲಿದಾನ, ಪ್ರೀತಿ- ಸತ್ಯ-ಅಹಿಂಸಾಮಾರ್ಗದ ಮೂಲಕ ಸ್ವಾತಂತ್ರ್ಯ ದೊರಕಿಸಿಟ್ಟ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ, ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದೆಂದರು, ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ವಿವರಿಸಿದರು ಹಾಗೂ ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರೀಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.

ನೆರಿಯ ಗ್ರಾಮದ ಹಿರಿಯ ನಾಗರಿಕರಾದ ಸಿ.ವಿ.ಚಾಂಡಿ ಬೆರಳಿಗರ ಚೆರಙಗರಪುತ್ತನ್‌ಪುರ, ಶ್ರೀಮತಿ ನಾಗಮ್ಮ ಉಂಬಾಜೆ ಹಾಗೂ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯ ಸಿ.ಜೆ.ಅಹಮ್ಮದ್ ಕುಂಞಿ ಇವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಪೇಟಾ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಟ್ರಸ್ಟಿ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ಹಾಗೂ ಆಶ್ರಮ ನಿವಾಸಿಯಾದ ಉಮೇಶ್‌ರವರು ವೇದಿಕೆಯನ್ನಲಂಕರಿಸಿದ್ದರು. ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸಿಯೋನ್ ಆಶ್ರಮದ ಹಿರಿಯ ನಾಗರಿಕರಿಗೆ ಒಳಾಂಗಣ ಆಟಗಳನ್ನುಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಿಯೋನ್ ಆಶ್ರಮದ ಮ್ಯಾನೇಜರ್ ಶ್ರೀಮತಿ ಸಂಧ್ಯಾಸುಭಾಷ್‌ರವರು, ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಯವರಾದ ಶ್ರೀಮತಿ ದಿನವತಿಯವರು ಸ್ವಾಗತಿಸಿ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ.ಯವರು ಕಾರ್ಯಕ್ರಮ ನಿರೂಪಿಸಿದರು.

Related posts

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹುದ್ದೆಗೆ ಗೇರುಕಟ್ಟೆಯ ಹಿದಾಯತುಲ್ಲಾ ಕೆ.ಎ ಆಯ್ಕೆ

Suddi Udaya

ಪಟ್ರಮೆ ಸಂಕೇಶದಲ್ಲಿ ವಾಸದ ಮನೆಯ ಹಿಂಬದಿಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಅಡ್ಡೆ- ಅಬಕಾರಿ ಇಲಾಖೆಯಿಂದ ದಾಳಿ ಆರೋಪಿ ಪರಾರಿ ಸೊತ್ತುಗಳು ವಶ

Suddi Udaya

ಕುಂಡದಬೆಟ್ಟು ಉರೂಸ್ ಗೆ ಸಮಾಪ್ತಿ

Suddi Udaya

ಮಹಾ ಕುಂಭಮೇಳದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪುಣ್ಯಸ್ನಾನ

Suddi Udaya

ಉರುವಾಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ವಿವಿಧ ಸಮಿತಿಯ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಏಕಾಹ ಭಜನಾ ಮಹೋತ್ಸವ

Suddi Udaya

ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಕಿಯರು

Suddi Udaya
error: Content is protected !!