31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 542ನೆಯ ಸೇವಾ ಯೋಜನೆ ಅಂಗವಾಗಿ ತಾಲೂಕಿನ 11 ಆಶ್ರಮಗಳಿಗೆ ಅಕ್ಕಿ ವಿತರಣೆ,11 ಬಡ ರೋಗಿಗಳಿಗೆ ವಸ್ತ್ರ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿಧದ ಬಗೆಯ ಹಣ್ಣು ಹಂಪಲುಗಳ ಗಿಡಗಳ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ಸಮಾಜ ಸೇವೆ ಮಾಡುವ ಚಿಂತನೆ ಎಲ್ಲರಲ್ಲಿ ಇರುವುದಿಲ್ಲ.ಸ್ವಾರ್ಥ ಬದುಕು ಸಾಧಿಸುವವರೆ ಅಧಿಕ. ಅದರೆ ಕಳೆದ 11 ವರ್ಷಗಳ ಹಿಂದೆ ನೊಂದವರ ಸೇವೆ ಮಾಡುವ ಕನಸನ್ನು ಕಂಡ ರಾಜಕೇಸರಿ ತಂಡದ ಸ್ಥಾಪಕಾದ್ಯಕ್ಷ ದೀಪಕ್ ಜಿ ಯವರ ಕನಸು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಮಾಜ ಸೇವಾ ಸಂಸ್ಥೆಗೆ ಆದ್ಯತೆ ನೆಲೆಯಲ್ಲಿ ಸರಕಾರ ನೆರವು ನೀಡಬೇಕು ಮತ್ತು ದೀಪಕ್ ಜಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದರು.

ಅವರು ಅ.1 ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 542ನೆಯ ಸೇವಾ ಯೋಜನೆ ಅಂಗವಾಗಿ ನಾನಾ ತಾಲೂಕಿನ 11 ಅಶಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ,11 ಅಶಕ್ತ ಬಡ ರೋಗಿಗಳಿಗೆ ವಸ್ತ್ರ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿಧದ ಬಗೆಯ ಹಣ್ಣು ಹಂಪಲುಗಳ ಗಿಡಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ಮೋಸ್ಟ್ ಹೋಲಿ ರೆಡಿಮೇಡ್ ಚರ್ಚ್ ಧರ್ಮಗುರು ಫಾ. ವಾಲ್ಟರ್ ಡಿಮೆಲ್ಲೊ , ಬಳಂಜದ ಧರ್ಮಗುರು ಝಮೀರ್ ಸಅದಿ ಅಲ್ ಫಾಝಿಲ್ , ಉಜಿರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್, ಪತ್ರಕರ್ತ ಮನೋಹರ ಬಳಂಜ, ತಾಲೂಕು ಆಸ್ಪತ್ರೆ ಕಚೇರಿಯ ವ್ಯವಸ್ಥಾಪಕ ಅಜಯ್ ., ಮದಿಮಯೆ ತುಳು ಚಲನಚಿತ್ರದ ತಂಡ, ಬಾಲ ನಟ ಅಮನ್ ಎಸ್.ಕರ್ಕೇರ, ರಾಜಕೇಸರಿ ತಂಡದ ಸ್ಥಾಪಕಾದ್ಯಕ್ಷ ದೀಪಕ್ ಜಿ, ಜಿಲ್ಲಾದ್ಯಕ್ಷ ಅಶೋಕ್ ಪೂಜಾರಿ ಮಾಲೆಮಾರ್, ಖ್ಯಾತಿ ನೃತ್ಯ ಕೊರಿಯೋಗ್ರಾಫರ್ ರಾಜೇಶ್ ಕಣ್ಣೂರು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಪ್ರೇಮ್ ರಾಜ್ ರೋಸನ್ ಸಿಕ್ವೇರಾ ಸ್ವಾಗತಿಸಿ, ಅಧ್ಯಕ್ಷ ಸಂದೀಪ್ ವಂದಿಸಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ಕಡ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ

Suddi Udaya

ಕೊಕ್ಕಡ: ನೂತನ ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಉದ್ಘಾಟನೆ

Suddi Udaya

ಬೆಳ್ತಂಗಡಿಯ ಸಿಮ್ರಾ ಪರ್ವಿನ್ ಗೆ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ಕಕ್ಕೆನೇಜಿ ವಾಸುದೇವ ರಾವ್ ಅವರ ಅಂಗಡಿಯಲ್ಲಿ ಎಲ್ಲರ ಗಮನ ಸೆಳೆದ ತೆಂಗಿನ ಕಾಯಿ

Suddi Udaya

ಬೆಳ್ತಂಗಡಿಯ ಹಲವು ಕಡೆ ಆಲಿಕಲ್ಲು ಮಳೆ

Suddi Udaya

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಚುನಾವಣಾ ಅರಿವು ಸ್ಪರ್ಧೆಗಳ ಉದ್ಘಾಟನೆ

Suddi Udaya
error: Content is protected !!