September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಆಚರಣೆ

ಕುವೆಟ್ಟು: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುವೆಟ್ಟು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಗಾಂಧೀಜಿ ಹಾಗೂ ಶಾಸ್ತ್ರಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಗಾಂಧೀಜಿ ಅವರ ರಘುಪತಿ ರಾಘವ ರಾಜಾರಾಮ್ ಗೀತೆಯನ್ನು ಹಾಡಲಾಯಿತು. ಗಾಂಧೀಜಿ ಅವರ ಜೀವನ ಹಾಗೂ ತತ್ವ ಆದರ್ಶಗಳ ಬಗ್ಗೆ ಟಿ ಜಿ ಟಿ ಶಿಕ್ಷಕರಾದ ಸುರೇಶ್ ಅವರು ಮಾಹಿತಿ ನೀಡಿದರು. ಬಳಿಕ ಶಾಲಾವರಣವನ್ನು ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ದಾನಿಗಳು ಹಿರಿಯರಾದ ಗೋವಿಂದ ಭಟ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿರಾಜ್ ಚಿಲಿಂಬಿ, ಶಾಲಾ ಮುಖ್ಯೋಪಾಧ್ಯಾಯರಾದ ಭಾಸ್ಕರ್, ಶಿಕ್ಷಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ನೈರುತ್ಯ ಶಿಕ್ಷಕ ಕ್ಷೇತ್ರದ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಸ್.ಎಲ್ ಭೋಜೇಗೌಡ ಗೆಲುವು

Suddi Udaya

ನ್ಯೂ ವೈಬ್ರೆಂಟ್ ಕಾಲೇಜು ಪಿಯು ಫಲಿತಾಂಶದಲ್ಲಿ ಸರ್ವಶ್ರೇಷ್ಠ ಸಾಧನೆ: ಧನುಷ್ ಗುತ್ತಿ 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ಪುತ್ತಿಲ ಕುಂಡಡ್ಕ : ಮನೆಯ ದಾರಂದ ಬಿದ್ದು ಶಾಲಾ ಬಾಲಕಿ ಅಲ್ಫಿಯಾ ಮೃತ್ಯು

Suddi Udaya

ಆಳ್ವಾಸ್ ಕಾಲೇಜು: ಡಾ. ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ – ಪ್ರೀತಿಯ ಸಖ್ಯ” ವಿಶೇಷ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ ಆಚರಣೆ

Suddi Udaya

ಪಿನಾಕಲ್ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

Suddi Udaya
error: Content is protected !!