25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

‘ಅಂಬರ ಮರ್ಲೆರ್’ ರಿರ್ಟನ್ಸ್ ತುಳು ಹಾಸ್ಯ ಧಾರಾವಾಹಿ ಬಿಡುಗಡೆ

ಬೆಳ್ತಂಗಡಿ: ಅರ್ನ ಕ್ರಿಯೇಷನ್ಸ್ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೨೦೧೭ರಲ್ಲಿ ಪ್ರಾರಂಭವಾಗಿ ಮೊತ್ತ ಮೊದಲು ನಮ ತೆಲಿಪುಗ ಎನ್ನುವ ತುಳು ಹಾಸ್ಯ ಧಾರಾವಾಹಿಯು ಬಿಡುಗಡೆಗೊಂಡು ಅಂಡೆ ದುರ್ಸುಲು, ಪೂರಿ ಬಾಜಿ ಹಾಗೂ ಇನ್ನಿತರ ತುಳು ಹಾಸ್ಯ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ಯಶಸ್ವಿ ಪ್ರದರ್ಶನ ನೀಡಿ ಪುತ್ತೂರಿನಲ್ಲಿ ಅಲ್ಲದೆ ಇಡೀ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮನೆ ಮಾತಾಯಿತು. ಅರ್ನ ಕ್ರಿಯೇಷನ್ಸ್ ಸಂಸ್ಥೆ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿದ್ದು ಸಂಸ್ಥೆಯಲ್ಲಿ ಪ್ರತಿಭಾನ್ವಿತ ಕಲಾವಿದರು, ಕ್ರಿಯಾಶೀಲ ತಂತ್ರಜ್ಞರ ತಂಡವನ್ನು ಮುನ್ನಡೆಸುತ್ತಾ ಬಂದಿದೆ. ಇದೀಗ ತಂಡವು “ಅಂಬರ ಮರ್ಲೆರ್” ಎನ್ನುವ ಹೊಸ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯ 24 ಕಂತುಗಳನ್ನು ತಯಾರು ಮಾಡಿದ್ದು ದೂರದರ್ಶನದ ಚಂದನ ವಾಹಿನಿಯ ಮುಖಾಂತರ ಹಳ್ಳಿ ಹಳ್ಳಿಯ ಹಾಗೂ ಇಡೀ ರಾಜ್ಯ ಮಟ್ಟದಲ್ಲಿ ಇರುವ ತುಳು ಪ್ರೇಕ್ಷಕರನ್ನು ಪ್ರತಿ ಭಾನುವಾರ ಮಧ್ಯಾಹ್ನ ಸಮಯ 1.30 ರಿಂದ 2.00 ಗಂಟೆಯವರೆಗೆ ದೂರದರ್ಶನದ ಮುಂದೆ ಕುಟುಂಬ ಸಮೇತ ಕುಳಿತು ನೋಡಬಹುದು.


ಧಾರವಾಹಿಯ ಚಿತ್ರೀಕರಣ ಪುತ್ತೂರು, ಮಂಗಳೂರು, ಹಾಗೂ ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ನಡೆದಿದ್ದು ಈ ಧಾರಾವಾಹಿಯಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ, ರಂಗಭೂಮಿಯ ಹೆಸರಾಂತ ಹಾಸ್ಯ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ. ಮಜಾ ಟಾಕೀಸ್‌ನ ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ ಹಾಗೇಯೇ ತುಳು ನಾಟಕ ರಂಗ, ಚಿತ್ರ ರಂಗದ ದಿಗ್ಗಜರಾದ ಸುಂದರ್ ರೈ ಮಂದಾರ, ಉಮೇಶ್ ಮಿಜಾರ್, ಅರುಣ್ ಚಂದ್ರ ಬಿ.ಸಿ ರೋಡ್, ರಾಜೇಶ್ ಮೀಯಪದವು, ರಂಜನ್ ಬೋಳೂರು, ಸೋಮನಾಥ ಶೆಟ್ಟಿ ಮಂಗಲ್ಪಾಡಿ, ರವಿ ರಾಮಕುಂಜ, ಸುನಿಲ್ ನೆಲ್ಲಿ ಗುಡ್ಡೆ, ರೂಪ ವರ್ಕಾಡಿ, ನಮಿತಾ ಕಿರಣ್, ಪ್ರತ್ವಿನ್ ಪೊಳಲಿ ಹಾಗೂ 75 ಕ್ಕೂ ಹೆಚ್ಚೂ ತುಳು ನಾಟಕ ಹಾಗೂ ಸಿನಿಮಾ ಕಲಾವಿದರು ಅಭಿನಯಿಸಿದ್ದಾರೆ. ಇನ್ನುಳಿದಂತೆ ತಾಂತ್ರಿಕ ತಂಡದಲ್ಲಿ ಪ್ರಸಾದನ ಪ್ರಸಾದ್ ಕೊಯಿಲ, ಕಲೆ ಹಾಗೂ ನಿರ್ಮಾಣ ನಿರ್ವಹಣೆ ವಿಜಯ್ ಮಯ್ಯ ಐಲ, ಸಹ ನಿರ್ದೇಶನ ರವಿ ಎಂ ಎಸ್ ವರ್ಕಾಡಿ, ಸಾಹಿತ್ಯ ಹಾಗೂ ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಬೆಳಕು ಯುನಿಟ್ ರಾಜ್ ಪ್ರೊಡಕ್ಷನ್ಸ್ , ಬೆಳಕು ಸಹಾಯ ಪ್ರಜ್ವಲ್ ಆಚಾರ್ಯ, ಪವನ್ ಕುಮಾರ್, ನವೀನ್, ಪ್ರಚಾರ ಕಲೆ ಗಣೇಶ್ ಕೆ , ಸಹ ಛಾಯಾಗ್ರಹಣ ಸಂಜಯ್ ನಾರಾಯಣ, ಅಶೋಕ್ ಬೇಕೂರ್, ಹಿನ್ನೆಲೆ ಸಂಗೀತ ಗುರು ಬಾಯಾರ್ ,ಮುಖ್ಯ ಛಾಯಾಗ್ರಹಣ ಹಾಗೂ ಸಂಕಲನ ಧನು ರೈ ಪುತ್ತೂರು, ಸಂಚಿಕೆ ನಿರ್ದೇಶನ ಪ್ರಜ್ವಲ್ ಕುಮಾರ್ ಅತ್ತಾವರ, ಕಥೆ, ನಿರ್ಮಾಣ, ಪ್ರಧಾನ ನಿರ್ದೇಶನದ ಜವಾಬ್ದಾರಿಯನ್ನು ಸುಂದರ್ ರೈ ಮಂದಾರ ನಿರ್ವಹಿಸಿದ್ದಾರೆ.


ಈ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಪ್ರತೀ ಭಾನುವಾರ ಮಧ್ಯಾಹ್ನ 1.30 ರಿಂದ2.00 ಗಂಟೆಯವರೆಗೆ ಪ್ರಸಾರವಾಗಲಿದೆ ಎಂದು ಅರ್ನ ಕ್ರಿಯೇಶನ್ಸ್ ಪ್ರಧಾನ ನಿರ್ದೇಶಕರು ಹಾಗೂ ನಿರ್ಮಾಪಕರು ಸುಂದರ್ ರೈ ಮಂದಾರ ತಿಳಿಸಿದ್ದಾರೆ.

Related posts

ಕನ್ನಡ ಸೇನೆ -ಕರ್ನಾಟಕ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ತೋಟತ್ತಾಡಿ: ನದಿಗೆ ಸ್ನಾನಕ್ಕೆ ತೆರಳಿದ ಜೈಸನ್ ಪಿ.ಎಂ ರವರ ಶವ ಪತ್ತೆ

Suddi Udaya

ಬೆಳ್ತಂಗಡಿ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಅದೃಷ್ಟವಂತ ಯೋಜನೆಯಲ್ಲಿ ಗ್ರಾಹಕರು ಪಡೆದರು ದ್ವಿಚಕ್ರ ವಾಹನ ಡ್ಯಾನ್ಸ್ ಟು ಡ್ಯಾನ್ಸ್ ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಎನ್ .ಎಸ್. ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!