25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ನಮ್ಮ ಮಣ್ಣು ನಮ್ಮ ದೇಶ ಕಾರ್ಯಕ್ರಮ

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರ ಕಲ್ಪನೆಯ ನಮ್ಮ ಮಣ್ಣು ನಮ್ಮ ದೇಶ ಕಾರ್ಯಕ್ರಮ ಬೆಳ್ತಂಗಡಿ ಮಂಜುನಾಥ ಸಭಾಭವನದ ಪಿನಾಕಿ ಹಾಲ್ ನಲ್ಲಿ ಅ.3 ರಂದು ನಡೆಯಿತು.


ಕಾರ್ಯಕ್ರಮ ವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಇಡೀ ಭಾರತ ಒಂದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಡುವ ನಿಟ್ಡಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಯೋಧರ ಉದ್ಯಾನಕ್ಕೆ ದೇಶದ ಎಲ್ಲಾ ಧಾರ್ಮಿಕ ಕ್ಷೇತ್ರ, ಯೋಧರ ಮನೆಯ ಮಣ್ಣು ಸಂಗ್ರಹಿಸಿ, ಸಮರ್ಪಿಸುವ ಮೂಲಕ ನಮಗೂ ಸಂತೋಷದ ಭಾವನೆ ಉಂಟಾಗಿದೆ ಎಂದರು.


ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ, ನಮ್ಮ ದೇಶ ನಮ್ಮ ಮಣ್ಣು ಕಾರ್ಯಕ್ರಮದ ಜಿಲ್ಲಾ ಸಹಸಂಚಾಲಕ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.
ಮಂಡಲ ಉಪಾಧ್ಯಕ್ಷ ಸೀತಾರಮ ಬಿ.ಎಸ್. ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ವಂದೇಮಾತರಂ ಹಾಡಿದರು.
ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ತಂದ ಮಣ್ಣುಗಳನ್ನು ಪ್ರಮುಖರು ಸಮರ್ಪಿಸಿದರು.

Related posts

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

Suddi Udaya

ಮುಳಿಯ ಜ್ಯುವೆಲ್ಸ್ ನಿಂದ ನೀಟ್ ಸಾಧಕ ಎಕ್ಸೆಲ್ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ ರಿಗೆ ಗೌರವಾರ್ಪಣೆ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಮತ ಬೇಟೆ

Suddi Udaya

ಕಾಶಿಪಟ್ಣ: ರಿಕ್ಷಾ ಪಲ್ಟಿ, ಶೀಘ್ರವಾಗಿ ರಸ್ತೆ ದುರಸ್ತಿಗೆ ಪಂಚಾಯತ್ ಗೆ ಮನವಿ

Suddi Udaya

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ರಥೋತ್ಸವ

Suddi Udaya
error: Content is protected !!