ಮಿತ್ತಬಾಗಿಲು: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಎಸ್. ವಿನಯಚಂದ್ರ ರವರ ಅಧ್ಯಕ್ಷತೆಯಲ್ಲಿ ಕೊಲ್ಲಿ ದುರ್ಗಾ ದೇವಿ ಕಲಾ ಮಂದಿರದಲ್ಲಿ ನಡೆಯಿತು.
2022-23 ನೇ ಸಾಲಿನಲ್ಲಿ9.6 ಕೋಟಿ ವ್ಯವಹಾರವನ್ನು ಮಾಡಿ2.8 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಹಾಲು ಉತ್ಪಾದಕರಿಗೆ 65% ಬೋನಸ್ಸು ಮತ್ತು ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆಯನ್ನು ಮಾಡಲಾಯಿತು. ಸಂಘವು ನೂತನ ಕಟ್ಟಡವನ್ನು ನಿರ್ಮಿಸಿ ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ) ನ್ನು ಅಳವಡಿಸಿರುತ್ತದೆ. ಗುಣಮಟ್ಟದ ಹಾಲು, ಶುದ್ಧವಾದ ಹಾಲು, ಉತ್ತಮ ದರವನ್ನು ನೀಡಲು ಸಹಕಾರವಾಗಿರುತ್ತದೆ.
ಸದಸ್ಯರೆಲ್ಲರೂ ಕೃಷಿಗೆ ಪೂರಕವಾಗಿ ಹೈನುಗಾರಿಕೆಯನ್ನು ಮಾಡಿ ಹೆಚ್ಚು ಹಾಲು ಉತ್ಪಾದಿಸಿ ಸಂಘಕ್ಕೆ ಪೂರೈಸಿ ತನ್ನ ಆರ್ಥಿಕತೆಯನ್ನು ಬಲಪಡಿಸಬೇಕೆಂದು ಸಭಾಧ್ಯಕ್ಷರಾದ ವಿನಯಚಂದ್ರರವರು ಸದಸ್ಯರಿಗೆ ಸಲಹೆ ನೀಡಿದರು. ಸಂಘದ ಉಪಾಧ್ಯಕ್ಷರಾದ ಕೆ.ನೇಮಿರಾಜ ರವರು ಸಭೆಯು ನ್ನುದ್ದೇಶಿಸಿ ಮಾತನಾಡುತ್ತಾ ‘ಸಮಾಜದ ಉತ್ತಮ ನಡವಳಿಕೆಗಳಿಗೆ ಭಾರತ ಸಂವಿಧಾನದ ಆಶಯಗಳನ್ನು ವ್ಯಕ್ತಪಡಿಸುತ್ತಾ ಡಾ” ಬಿ.ಆರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಚಿಂತನೆ ಹಾಗೂ ವಿಚಾರಗಳನ್ನು ನಾವೆಲ್ಲರೂ ಕೂಡ ಮೈಗೂಡಿಸಿಕೊಳ್ಳಬೇಕಾಗಿದೆ ಎನ್ನುತ್ತಾ ಸಂಘಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಅವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘವು ಜಿಲ್ಲಾ ಮಟ್ಟದ ಸಾಧನ ಪ್ರಶಸ್ತಿಯನ್ನು ಪಡೆದುಕೊಂಡಿರುವುದರ ಸಲುವಾಗಿ ಸದಸ್ಯರೆಲ್ಲರಿಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ಎನ್ ವಿನಯಚಂದ್ರ ನಡುಬೈಲ್ ರವರು ನಿರೂಪಿಸಿದರು. ಉಪಾಧ್ಯಕ್ಷರಾದ ಕೆ.ನೇಮಿರಾಜ ರವರು ಧನ್ಯವಾದ ನೀಡಿದರು.