April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.7: ಪುತ್ತೂರಿಗೆ ಶೌರ್ಯ ಜಾಗರಣ ರಥಯಾತ್ರೆ: ಹಿಂದು ಶೌರ್ಯ ಸಂಗಮ

ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ದೇಶದಾದ್ಯ೦ತ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದ್ದು, ಪುತ್ತೂರಿಗೆ ಬರುವ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದ ಸ್ವಾಗತ ಸಮಿತಿ ಸಂಚಾಲಕರಾಗಿ ಕೃಷ್ಣಪ್ರಸಾದ್ ಬೆಟ್ಟ ಮತ್ತು ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ವಿರೂಪಾಕ್ಷ ಭಟ್, ಉಪಾಧ್ಯಕ್ಷರುಗಳಾಗಿ ಭಾಸ್ಕರ ಬಲ್ಯಾಯ ಕಾವು, ಅಜಿತ್ ರೈ ಹೊಸಮನೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶರಾವತಿ ರವಿನಾರಾಯಣ, ಜಯಂತಿ ನಾಯಕ್, ಸಹ ಕಾರ್ಯದರ್ಶಿಗಳಾಗಿ ದಿನೇಶ್ ಪಂಜಿಗ, ಸಚಿನ್ ಶೆಣೈ, ಸದಸ್ಯರುಗಳಾಗಿ ಡಾ.ದಯಾಕರ್ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸಂಪತ್ ಸುವರ್ಣ, ಜನಾರ್ದನ ಕೋಡಿ, ಮಹಾಬಲ ರೈ, ಅಶೋಕ್ ಬ್ರಹ್ಮನಗರ, ಆನಂದ ನೆಕ್ಕರೆ, ಮನೀಶ್ ಬನ್ನೂರು, ಮಮತ ಅವರನ್ನು ಆಯ್ಕೆ ಮಾಡಲಾಗಿದೆ.

ಪುತ್ತೂರು ಪಂಚವಟಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಬೈಠಕ್‌ನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.

ಹಿಂದು ಶೌರ್ಯ ಜಾಗರಣ ರಥಯಾತ್ರೆಯು ಸೆ.25ರಂದು ಚಿತ್ರದುರ್ಗದಿಂದ ಆರಂಭಗೊಂಡಿದ್ದು, ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಜಿಲ್ಲೆಗಳ ಮೂಲಕ ಹಾದು ಅ.7ಕ್ಕೆ ಪುತ್ತೂರಿಗೆ ಬರಲಿದೆ. ಪುತ್ತೂರಿನಲ್ಲಿ ಸಂಜೆ ಬೃಹತ್ ಶೋಭಾಯಾತ್ರೆ ಮತ್ತು ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದು ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೀಷ್ಠ ಪ್ರಚಾರಕ ಸು. ರಾಮಣ್ಣ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.ಅ.10ಕ್ಕೆ ಉಡುಪಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ರಥಯಾತ್ರೆ ಸಂಪನ್ನಗೊಳ್ಳಲಿದೆ.

Related posts

ಪೆರಿಂಜೆ ಸ. ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಕೆ. ರವರಿಗೆ ಬೀಳ್ಕೊಡುಗೆ

Suddi Udaya

ನಾರಾವಿ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಲಾಯಿಲ ಮತಗಟ್ಟೆಗೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಭೇಟಿ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದನೆ: ಆ.25 ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

Suddi Udaya

ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ; ಉಮೇಶ್ ಶೆಟ್ಟಿ ಉಜಿರೆ ಬಳಗದ ಸದಸ್ಯರ ಪದಗ್ರಹಣ

Suddi Udaya

ಬಂದಾರು: ಮನೆ ಮೇಲೆ ಕುಸಿದು ಬಿದ್ದ ಧರೆ

Suddi Udaya
error: Content is protected !!