29.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಜೇಸಿಐ ಕಪಿಲಾ ಘಟಕಕ್ಕೆ ವಲಯಾಧ್ಯಕ್ಷರ ಭೇಟಿ, ಘಟಕ ವೆಬ್ ಸೈಟ್ ಲೋಕಾರ್ಪಣೆ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಅ. 4 ರಂದು ವಲಯ ಹದಿನೈದರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಸಂತ ಜಾನರ ಶಾಲಾ ಸಭಾಂಗಣದಲ್ಲಿ ಭೇಟಿ ನೀಡಿದರು.

ಸಮಾರಂಭದಲ್ಲಿ ಘಟಕದ ಅಧಿಕೃತ ವೆಬ್ ಸೈಟ್ https://www.jcikokkadakapila.com ಹಾಗೂ ಆಂಡ್ರಾಯ್ಡ್ ಆ್ಯಪ್ ಲೋಕಾರ್ಪಣೆ ಮಾಡಿದರು.

ಅವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಜೇಸಿ ಸಂಸ್ಥೆಯು ಉತ್ತಮ ಕಾರ್ಯಕ್ರಮ ಮೂಲಕ ಜನಸೇವೆ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶಾಲಾಕ್ಷಿ, ವಿಲ್ಮಾ ಶ್ವೇತಾ ಸ್ಟ್ರೆಲ್ಲಾ, ಯು. ನರಸಿಂಹ ನಾಯಕ್, ಕೆ. ವಸಂತ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ವಲಯಾಧ್ಯಕ್ಷರು ಹಾಗೂ ಅವರ ಧರ್ಮಪತ್ನಿಯನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕೌಕ್ರಾಡಿ ಸಂತ ಜಾನರ ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಪ್ರಕಾಶ್ ಬೊತೆಲ್ಲೋ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವರದಿ ವಾಚಿಸಿದರು. ಜೆಸಿಂತಾ ಡಿ ಸೋಜ ವಿಜೇತ ಮಕ್ಕಳ ವಿವರ ಓದಿದರು.


ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ ರಾವ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಾರ್ತಿಕ್ ಬಿ. ಅವರು ಶುಭ ಹಾರೈಸಿದರು. ರಾಜಾರಾಮ, ಜಸ್ವಂತ್ ಪಿರೇರಾ, ಪ್ರಿಯಾ, ದೀಪಾ, ಜೋಯ್ ಬೊತೆಲ್ಲೋ ಅವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ವಿಕ್ಟರ್ ವಂದಿಸಿದರು.

Related posts

ಸೋಣಂದೂರು: ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ

Suddi Udaya

ಕೊಕ್ಕಡ: ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯವರ ಅಂಗಡಿಯಿಂದ ರೂ. 1.80ಲಕ್ಷ ಹಣ ಕಳ್ಳತನ

Suddi Udaya

ಆಕರ್ಷ ಗೆ ಪಿ. ಎಚ್. ಡಿ ಪ್ರದಾನ

Suddi Udaya

ಲಾಯಿಲ: ಗುರಿಂಗಾನದಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು,: ಸುತ್ತಮುತ್ತಲ ಮನೆಗಳಿಗೆ ತುಂಬಿದ ನೀರು, ಸ್ಥಳಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Suddi Udaya

ಉಜಿರೆ: ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಉದ್ಘಾಟನಾ ಸಮಾರಂಭ

Suddi Udaya
error: Content is protected !!