24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವನ್ಯಜೀವಿ ವಲಯ ಅಳದಂಗಡಿ, ಪ್ರಾದೇಶಿಕ ವಲಯ ವೇಣೂರು ಹಾಗೂ ಗ್ರಾಮಸ್ಥರ ಸಹಕಾರದಿಂದ ಸ್ವಚ್ಚತಾ ಕಾರ್ಯ

ಅಳದಂಗಡಿ:ವನ್ಯಜೀವಿ ವಲಯ ಅಳದಂಗಡಿ ಹಾಗೂ ಪ್ರಾದೇಶಿಕ ವಲಯ ವೇಣೂರು ಮತ್ತು ಗ್ರಾಮಸ್ಥರ ಸಹಕಾರದಿಂದ ಅಳದಂಗಡಿ ಕೆದ್ದು- ಶಿರ್ಲಾಲು ರಸ್ತೆ ಬದಿ ಸ್ವಚ್ಚತಾ ಕಾರ್ಯ ನಡೆಯಿತು.

ರಸ್ತೆಯ ಬದಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಡಿಕ್, ಮದ್ಯದ ಬಾಟಲಿ, ಇತರ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು.

ಸರಕಾರವು ಸ್ವಚ್ಚತಾ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ರಸ್ತೆ ಬದಿ ತ್ಯಾಜ್ಯವನ್ನು ಎಸೆಯುವುದು, ಮದ್ಯದ ಬಾಟಲಿಗಳನ್ನು ಚೀಲದಲ್ಲಿ ತುಂಬಿಸಿ ರಸ್ತೆ ಬದಿ ಬಿಸಾಡುವುದು ಕಡಿಮೆಯಾಗಿಲ್ಲ. ಈ ರೀತಿ ಕಸಕಡ್ಡಿಗಳನ್ನು ಬಿಸಾಡಿ ಪರಿಸರವನ್ನು ಹಾಳು ಮಾಡುವವರ ವಿರುದ್ದ ಸ್ಥಳೀಯ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಸ್ವಚ್ಚತಾ ಕಾರ್ಯದಲ್ಲಿ ವನ್ಯ ಜೀವಿ ಅಳದಂಗಡಿ ಉಪ ವಲಯದ ಉಪ ವಲಯಾರಣ್ಯಧಿಕಾರಿ ರಮೇಶ್ ನಾಯ್ಕ್, ಗಸ್ತು ಅರಣ್ಯ ಪಾಲಕರು ಮಾರುತಿ ,ನಾಗೇಶ್, ವೇಣೂರು ವಲಯದ ಅಳದಂಗಡಿ ಶಾಖೆಯ ಗಸ್ತು ಅರಣ್ಯ ಪಾಲಕ ಮಂಜುನಾಥ್,ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ,ಶಿರ್ಲಾಲು ಗ್ರಾ.ಪಂ ಸದಸ್ಯ ಮಾಧವ, ಅಳದಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹರೀಶ್ ಆಚಾರ್ಯ,ಜಯರಾಮ್ ಪ್ರಸಾದ್,ಮನೋಹರ್, ದೇವುದಾಸ್ ಆಲಡ್ಕ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಬೆಳಾಲು ಪ್ರಾ.ಕೃ.ಪ.ಸ.ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಮೂಡುಕೋಡಿ ಶೀನ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

Suddi Udaya

ಸಹಾಯಕ ಕಾನೂನು ಅಭಿರಕ್ಷಕರಾಗಿ ನ್ಯಾಯವಾದಿ ಕುಮಾರಿ ಸ್ವಾತಿ ಕುಲಾಲ್ ನೇಮಕ

Suddi Udaya

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

Suddi Udaya
error: Content is protected !!