24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾದ ಮಡಂತ್ಯಾರಿನ ಪದ್ಮನಾಭ ಸಾಲ್ಯಾನ್ ರಿಗೆ ‘ಜಾಗೃತಿ ಅಣ್ಣ’ ಪ್ರಶಸ್ತಿ, ಗೌರವಾರ್ಪಣೆ

ಬೆಳ್ತಂಗಡಿ: ಇತ್ತೀಚೆಗೆ ನಡೆದ ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ, ಸುಳ್ಯದ ಅಮರಶ್ರೀಬಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ‘ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ| ವೀರೇಂದ್ರ ಹೆಗ್ಡೆಯವರು ಆಶೀರ್ವಾದದಿಂದ ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾದ ಮಡಂತ್ಯಾರು ಬಸವನಗುಡಿ ನಿವಾಸಿ ಜನಜಾಗೃತಿ ವಲಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರಿಗೆ ಜಾಗೃತಿ ಅಣ್ಣ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ನಡೆಸಲ್ಪಡುವ ಸಮುದಾಯ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವಿಶೇಷ ಸಾಧನೆ ಮಾಡಿರುತ್ತಾರೆ ಹಾಗೂ ಸ್ವ ಪ್ರೇರಣೆಯಿಂದ 100ಕ್ಕೂ ಹೆಚ್ಚು ಮಂದಿ ಮದ್ಯವ್ಯಸನಿಗಳ ಮನಃಪರಿವರ್ತನೆ ಮಾಡಿ ವಿವಿಧ ಕಡೆಗಳಲ್ಲಿ ನಡೆದ ಮದ್ಯವರ್ಜನ ಶಿಬಿರಗಳಿಗೆ ದಾಖಲಿಸಿರುತ್ತಾರೆ. ಈ ಮೂಲಕ ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾಗಿದ್ದಾರೆ. ಇವರ ವಿಶೇಷ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಜಾಗೃತಿ ಅಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಆಯ್ಕೆ

Suddi Udaya

ಉರುವಾಲು ಹಾಗೂ ಪದ್ಮುಂಜ ಶ್ರೀ ವರಾಮಹಾಲಕ್ಷ್ಮಿ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಸಮಾರಂಭ

Suddi Udaya

ಕಡಿರುದ್ಯಾವರ ನಿವಾಸಿ ಕೃಷ್ಣ ನಾಯಕ್ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಕುಲಾಲ್ ರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya
error: Content is protected !!